ಬೆಂಗಳೂರು,ಫೆಬ್ರವರಿ,27,2026 (www.justkannada.in): ಕರ್ನಾಟಕದಲ್ಲಿ ವಿಧಾನಸೌಧದೊಳಗೆ ದೃಶ್ಯ ಮಾಧ್ಯಮ ಬಿಡಬಾರದೆಂದು ನಿರ್ಧಾರವಾಗಿದೆ. ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗಿ ಪ್ರತಿಭಟನೆ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ವಿಧಾನಸೌಧಕ್ಕೆ ದೃಶ್ಯ ಮಾಧ್ಯಮಗಳ ನಿರ್ಬಂಧ ಮಾಡಿರುವುದು ಅಪಚಾರ ಅವಲಕ್ಷಣ. ದೃಶ್ತ ಮಾಧ್ಯಮ ನಿರ್ಬಂಧ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಅದೇಶ ಹಿಂಪಡೆಯದಿದ್ದರೆ ಸರಕಾರದ ವಿರುದ್ದ ಹೋರಾಟ ಮಾಡುವೆ ಎಂದರು.
ಮಾಧ್ಯಮದವರನ್ನ ಗುಲಾಮರಂತೆ ನೋಡಬಾರದು. ಯಾರು ಈ ತೀರ್ಮಾನ ತೆಗೆದುಕೊಂಡಿದ್ದಾರೋ ವಾಪಸ್ ಪಡೆಯಬೇಕು. ಸರ್ಕಾರದ ಈ ಆದೇಶ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ. ಸ್ಪೀಕರ್, ಸಿಎಂ ಚಿಂತಿಸಬೇಕು. ನೀವೇನು ಪರದೆ ಹಿಂದೆ ಇದ್ದೀರಾ? ಎಲ್ಲೆಂದರಲ್ಲಿ ನಿಮ್ಮನ್ನ ಕೇಳಬೇಕು. ನಿಮ್ಮನ್ನು ಪ್ರಶ್ನಿಸಬಾರದು ಅಂದರೆ ಹೇಗೆ? ನಾನು ಅಸೆಂಬ್ಲಿಯಲ್ಲಿ ಇದ್ದಿದ್ದರೇ ಅದರ ರೂಪವೇ ಬೇರೆ ಆಗುತ್ತಿತ್ತು ವಿಧಾನಸೌಧಕ್ಕೆ ದೃಶ್ಯ ಮಾದ್ಯಮ ನಿರ್ಬಂಧಿಸಿದ್ದು ಗಂಭೀರವಾದುದು. 15 ದಿನದಲ್ಲಿ ಸರ್ಕಾರ ತೀರ್ಮಾನಕ್ಕೆ ಬರದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗುವೆ ಎಂದು ವಾಟಾಳ್ ನಾಗರಾಜ್ ವಾರ್ನಿಂಗ್ ನೀಡಿದರು.
Key words: Vatal Nagaraj, warns, Vidhana Soudha, media, restriction







