Saturday, October 24, 2026

Dasara Wishes

Happy Dasara
Home Front Page  ನಾನು ಯಾವ ಶಕ್ತಿ ಪ್ರದರ್ಶನವನ್ನೂ ಮಾಡ್ತಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

 ನಾನು ಯಾವ ಶಕ್ತಿ ಪ್ರದರ್ಶನವನ್ನೂ ಮಾಡ್ತಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ ಮಾಡಿ: ಸಿಎಂ ಡಿಕೆಶಿ ಮನವಿ

ಬೆಂಗಳೂರು,ಫೆಬ್ರವರಿ,27,2026 (www.justkannada.in):  ಕೆಲ ಶಾಸಕರಿಂದ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಡಿನ್ನರ್ ಮೀಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಯಾವ ಶಕ್ತಿ ಪ್ರದರ್ಶನವನ್ನೂ ಮಾಡುತ್ತಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಿನ್ನೆಯ ಸಭೆಗೂ ನನಗೂ ಯಾವುದೇ ಸಂಬಂಧವಿಲ್ಲ.  ಕೆಲವರು ಫಾರಿನ್ ಗೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋಗುತ್ತಾರೆ. ಅನೇಕರು ಆಸೆ ಇಟ್ಟುಕೊಂಡಿರುತ್ತಾರೆ. ಕೆಲವರಿಗೆ ಮಂತ್ರಿಯಾಗುವ ಕನಸು ಇರುತ್ತೆ ಎಂದರು.

ಕೆಲ ಶಾಸಕರು ದೆಹಲಿಗೆ ಹೋಗುವ ವಿಚಾರ  ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಯಾರೂ ದೆಹಲಿಗೆ ಹೋಗಬೇಡಿ  ಎಂದರು.  ಅಲ್ಲದೆ ನಾನು ಪಕ್ಷದಲ್ಲಿ ಯಾವ ಶಕ್ತಿ ಪ್ರದರ್ಶನವನ್ನೂ ಮಾಡುತ್ತಿಲ್ಲ ಎಂದು ತಿಳಿಸಿದರು.

Key words: MLAs Dinner Meeting, DCM DK Shivakumar