ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿ ಮತ್ತು ಪ್ರವೃತ್ತಿ  ಕೂಡ ಬಹಳ ಮುಖ್ಯ- ಪಂಡಿತ್ ವೆಂಕಟೇಶ್ ಕುಮಾರ್

ಮೈಸೂರು,ಫೆಬ್ರವರಿ,20,2026 (www.justkannada.in): ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿ ಮತ್ತು ಪ್ರವೃತ್ತಿ  ಕೂಡ ಬಹಳ ಮುಖ್ಯ ಎಂದು ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು.

ಫೆಬ್ರವರಿ 16ರಿಂದ 20ರವರೆಗೆ ಮೈಸೂರು ನಗರದ ಅಂಚೆ ತರಬೇತಿ ಕೇಂದ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಾಂಸ್ಕೃತಿಕ ಸಮಾವೇಶದಲ್ಲಿ ದೇಶದಾದ್ಯಂತದ 21 ಅಂಚೆ ವಲಯಗಳ ಪ್ರತಿನಿಧಿಗಳಾಗಿ 293 ಸ್ಪರ್ಧಿಗಳು (ಅಂಚೆ ಇಲಾಖೆ ಉದ್ಯೋಗಿಗಳು ಹಾಗೂ ಅವರ ಮಕ್ಕಳು) ಭಾಗವಹಿಸಿದರು.

38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪಂಡಿತ್ ವೆಂಕಟೇಶ್ ಕುಮಾರ್ ಅವರು,  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಅರ್ಥಗರ್ಭಿತ. ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾದ ಇಲಾಖೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅಂಚೆ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಡಿಜಿಟಲಿಕರಣದ ಇಂದಿನ ಯುಗದಲ್ಲಿ ಒತ್ತಡಕೊಳ್ಳಗಾದಾಗ ಸಂಗೀತ ನೆಮ್ಮದಿಯನ್ನು ತರುತ್ತದೆ. ಎಂದು ಹೇಳಿದರು.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಫಲಿತಾಂಶವು ಒಟ್ಟು ಪ್ರದರ್ಶನದ ಆಧಾರದ ಮೇಲೆ ಈ ಕೆಳಗಿನಂತಿದೆ:

ಕೇರಳ ಅಂಚೆ ವಲಯವು 108  ಅಂಕಗಳೊಂದಿಗೆ ಒಟ್ಟು 22 ಬಹುಮಾನಗಳನ್ನು ಗಳಿಸಿ                             ( 17 ಪ್ರಥಮ, 4 ದ್ವಿತೀಯ ಹಾಗೂ 1 ತೃತೀಯ ಬಹುಮಾನಗಳೊಂದಿಗೆ ಚಾಂಪಿಯನ್ ಶಿಪ್ ಸ್ಥಾನವನ್ನು ಪಡೆಯಿತು.

ಕರ್ನಾಟಕ ಅಂಚೆ ವಲಯವು 105 ಅಂಕಗಳೊಂದಿಗೆ ಒಟ್ಟು 34 ಬಹುಮಾನಗಳನ್ನ (16 ಪ್ರಥಮ, 14 ದ್ವಿತೀಯ ಹಾಗೂ 4 ತೃತೀಯ ಬಹುಮಾನಗಳು) ಪಡೆದು ರನ್ನರ್‌ ಅಪ್ ಸ್ಥಾನವನ್ನು ಪಡೆಯಿತು. ಒಡಿಶಾ ಅಂಚೆ ವಲಯವು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು  ಗೆದ್ದು ತೃತೀಯ ಸ್ಥಾನವನ್ನು ಪಡೆದಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ. ಬೆಂಗಳೂರು ಕೇಂದ್ರ ಅಂಚೆ ವಲಯದ ನಿರ್ದೇಶಕರಾದ  ವಿ. ತಾರ, ಉತ್ತರ ಕರ್ನಾಟಕ ಅಂಚೆ ವಲಯದ ನಿರ್ದೇಶಕರಾದ ಹರ್ಷ ಮತ್ತು ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಡಾ. ಆಶಿಶ್ ಸಿಂಗ್ ಠಾಕೂರ್ ಹಾಜರಿದ್ದರು.

Key words: 38th, All India, Postal, Cultural Conference, Pandit Venkatesh Kumar