Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಸಫಾರಿ ಆರಂಭಿಸದಂತೆ ಆಗ್ರಹ: ರೈತರಿಂದ ಪ್ರತಿಭಟನೆ

ಸಫಾರಿ ಆರಂಭಿಸದಂತೆ ಆಗ್ರಹ: ರೈತರಿಂದ ಪ್ರತಿಭಟನೆ

ಚಾಮರಾಜನಗರ,ಫೆಬ್ರವರಿ,19,2026 (www.justkannada.in):  ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸದಂತೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದ ಬಳಿ ರೈತರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಫಾರಿ ಪುನಾರಂಭಿಸದಂತೆ ಹಾಗೂ ಸಫಾರಿಗೆ ಅನುಮತಿ ನೀಡಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ರೈತರನ್ನ ಪೊಲೀಸರು ವಶಕ್ಕೆ ಮುಂದಾಗಿದ್ದು ಈ ವೇಳೆ  ತಳ್ಳಾಟ ನೂಕಾಟ  ಮಾತಿನ ಚಕಮಕಿ ನಡೆಯಿತು.  ಎಲ್ಲಾ ರೈತರನ್ನ ಪೊಲೀಸರು ವಶಕ್ಕೆ ಪಡೆದರು. ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಬೇಗೂರು ಪೊಲೀಸ್ ಠಾಣೆಗೆ ರೈತರನ್ನ ರವಾನಿಸಿದರು.

ಇದಕ್ಕೂ ಮೊದಲು ಪೊಲೀಸರು ರೆಸಾರ್ಟ್ ಮಾಲೀಕರನ್ನು ವಶಕ್ಕೆ  ಪಡೆದಿದ್ದರು ಸಫಾರಿ ಪುನಾರಂಭ ಮಾಡಬೇಕೆಂದು ಆಗ್ರಹಿಸಿ ರೆಸಾರ್ಟ್ ಮಾಲೀಕರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನಾ ಸ್ಥಳಕ್ಕೆ ನುಗ್ಗಲು ಯತ್ನಿಸಿ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ರೆಸಾರ್ಟ್ ಮಾಲೀಕರು ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದು  ತೆರಕಣಾಂಬಿ ಠಾಣೆಗೆ ಕರೆದೊಯ್ದಿದ್ದರು.

Key words: Farmers, protest, safari , Chamaraja nagar