ಮಾಧ್ಯಮಗಳಿಗೆ ಕಡಿವಾಣ?  ಸರ್ಕಾರದ ವಿರುದ್ದ ಬಿಜೆಪಿ ನಾಯಕರಿಂದ ಕಿಡಿ

ಬೆಂಗಳೂರು,ಫೆಬ್ರವರಿ,18,2026 (www.justkannada.in): ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಬೈಟ್ ತೆಗೆದುಕೊಳ್ಳಲು ಸ್ಥಳ ನಿಗದಿ ಮಾಡಿದ್ದು ಅದೇ ಸ್ಥಳದಲ್ಲಿ ಮಾಧ್ಯಮಗಳು ಬೈಟ್ ತೆಗೆದುಕೊಳ್ಳಬೇಕಾಗಿದೆ. ಈ ಸಂಬಂಧ  ವಾರ್ತಾ ಇಲಾಖೆಗೆ ಆಡಳಿತ ಸಿಬ್ಬಂದಿ ಇಲಾಖೆ ಪತ್ರ ಬರೆದಿದೆ ಎನ್ನಲಾಗಿದ್ದು ಈ ಕುರಿತು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್ ವಿಶ್ವನಾಥ್,  ಇದು ಪ್ರಜಾಪ್ರಭುತ್ವ ವಾಕ್ ಸ್ವಾತಂತ್ರದ ಮೇಲಿನ ದಾಳಿ  ಮಾಧ್ಯಮದವರನ್ನ ವಿಧಾನಸೌಧದ ಮಹಡಿಗೆ ಬಿಡುತ್ತಿದ್ದರು.  ಸಚಿವ ಬೈರತಿ  ಸುರೇಶ ಕಚೇರಿಲ್ಲಿ ಕಳ್ಳತನಾವಗಿತ್ತು ಈ ಘಟನೆ ಪೊಲೀಸರ ವೈಪಲ್ಯದಿಂದ ಆಗಿರೋದು   ಮಾಧ್ಯಮಗಳಿಗೆ ಕಡಿವಾಣ ಸರಿಯಲ್ಲ ಎಂದು ಹರಿಹಾಯ್ದರು.

ಈ ಕುರಿತು ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸವೇ ಹಾಗೇ ಇದೆ. ಅವರ ಅಧಿಕಾರಕ್ಕೆ ಕುತ್ತು ಬಂದಾಗ ಮಾಧ್ಯಮಗಳನ್ನ ಹತ್ತಿಕ್ಕುತ್ತಾರೆ  ಅವರ ತಪ್ಪುಗಳನ್ನು  ಎತ್ತಿ ಸಮಾಜಕ್ಕೆ ತೋರಿಸಿದಾಗ ಹತ್ತಿಕ್ಕಲು ಮಾಧ್ಯಮಗಳನ್ನ ಹತ್ತಿಕ್ಕಲು ಯತ್ನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Key words: Curbing, media, BJP leaders, against, government