ಬೆಂಗಳೂರು,ಫೆಬ್ರವರಿ,17,2026 (www.justkannada.in): ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಯ ಬಂದಾಗ ಸಿಎಂ ಸಿದ್ದರಾಮಯ್ಯನವರೇ ಉತ್ತರ ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾಯಕತ್ವ ವಿಚಾರದಲ್ಲಿ ನಾನು ಸಿಎಂ ಮಾತನಾಡಿದ್ದೇವೆ . ನಾನು, ಸಿಎಂ, ಹೈಕಮಾಂಡ್ ಸೇರಿಯೇ ತೀರ್ಮಾನಿಸಿದ್ದೇವೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡ್ತಾರೆ. ಸಮಯ ಬಂದಾಗ ಅವರೇ ರಾಜ್ಯದ ಜನತೆಗೆ ಎಲ್ಲಾ ಹೇಳುತ್ತಾರೆ ಎಂದರು.
ಎಲ್ಲರಿಗೂ ಎಲ್ಲದಕ್ಕೂ ಉತ್ತರ ಕೊಡಲು ಆಗಲ್ಲ. ನಾನು ಸಿಎಂ, ಖರ್ಗೆ ಏನು ಮಾತನಾಡಿದ್ದೇವೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಸಿದ್ದರಾಮಯ್ಯ ಅವರೇ ಹೇಳುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Leadership change, CM Siddaramaiah, answer, DCM, DK Shivakumar







