ಬೆಂಗಳೂರು, ಫೆ.೧೬,೨೦೨೬: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಆರೋಪಗಳನ್ನು ಚರ್ಮ ವೈದ್ಯೆ ಡಾ. ಶರಣ್ಯ ಅವರು ಹಂಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹಾಲು ಮಹಾಮಂಡಳಿ (KMF) ಕಾನೂನು ಕ್ರಮಕ್ಕೆ ಮುಂದಾಗಿದೆ.
ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ, ಎಫ್ಎಸ್ಎಸ್ಎಐ ಅಥವಾ ಪ್ರಮಾಣಿತ ಪ್ರಯೋಗಾಲಯದ ವರದಿ ಇಲ್ಲದೆ ತಪ್ಪು ಮತ್ತು ಭೀತಿಜನಕ ಮಾಹಿತಿ ಹರಡಲಾಗುತ್ತಿದೆ ಎಂದು ಸಂಸ್ಥೆ ಆರೋಪಿಸಿದೆ.

ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕ ರೈತರ ಜೀವನಾಡಿಯಾಗಿರುವ ಕೆಎಂಎಫ್, ನಂದಿನಿ ಉತ್ಪನ್ನಗಳು ಕಠಿಣ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿ ತಯಾರಾಗುತ್ತವೆ ಎಂದು ಸ್ಪಷ್ಟಪಡಿಸಿದೆ. ಪಶುಗಳಿಗೆ ಹಾನಿಕಾರಕ ಪದಾರ್ಥಗಳು ಅಥವಾ ನಿಷೇಧಿತ ಪ್ರೆಡೇಟಿವ್ಸ್/ಕೃತಕ ರಾಸಾಯನಿಕಗಳನ್ನು ಬಳಸದೆ, ಸುರಕ್ಷಿತ ಹಾಗೂ ನೈಸರ್ಗಿಕ ವಿಧಾನಗಳಲ್ಲಿ ಹಾಲು ಸಂಗ್ರಹಿಸಿ ಉತ್ಪಾದನೆ ನಡೆಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಎಲ್ಲಾ ಉತ್ಪನ್ನಗಳು ನಿಯಮಿತವಾಗಿ ಗುಣಮಟ್ಟ ಪರೀಕ್ಷೆಗೊಳಗಾಗಿ ಬಳಿಕವೇ ಮಾರುಕಟ್ಟೆಗೆ ಬಿಡುಗಡೆ ಆಗುತ್ತವೆ ಎಂದು ಕೂಡ ಹೇಳಿದೆ.

ಷಡ್ಯಂತ್ರದ ಶಂಕೆ:
ಕೇವಲ ನಂದಿನಿ ಉತ್ಪನ್ನಗಳನ್ನು ಗುರಿಯಾಗಿಸಿ ಈ ರೀತಿಯ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆ ಇದರ ಹಿಂದೆ ಸಂಚು ಇರಬಹುದೆಂಬ ಶಂಕೆಯನ್ನೂ ಕೆಎಂಎಫ್ ವ್ಯಕ್ತಪಡಿಸಿದೆ.
ರೈತರ ಬದುಕಿಗೆ ಧಕ್ಕೆ ತರಬಹುದಾದ ತಪ್ಪು ಮಾಹಿತಿಯನ್ನು ತಡೆಯಲು ಸೈಬರ್ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ತಪ್ಪು ಮಾಹಿತಿ ಹಂಚುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
key words: Misinformation, Against, Nandini Products, KMF, Files Complaint, with Cyber Police

SUMMARY:
Misinformation Against Nandini Products: KMF Files Complaint with Cyber Police
The Karnataka Milk Federation (KMF) has initiated legal action after a dermatologist, Dr. Sharanya, allegedly spread claims on social media that consuming Nandini products can cause cancer. The federation stated that such claims are being circulated without any scientific evidence, FSSAI certification, or reports from accredited laboratories, and termed the information false and fearmongering.
KMF clarified that Nandini products are produced under strict quality standards and are the lifeline of lakhs of milk-producing farmers in the state. The federation emphasized that milk procurement and production are carried out using safe and natural methods, without the use of harmful substances, prohibited preservatives, or artificial chemicals. All products undergo regular quality testing before being released into the market.

KMF has also expressed suspicion that Nandini products are being selectively targeted in this misinformation campaign. To protect farmers’ livelihoods and curb the spread of false information, the federation has filed an official complaint with the cyber police and warned that strict legal action will be taken against those spreading misinformation.





