Sunday, September 13, 2026

BDA Apartments

ಶಾಸಕ ಭೈರತಿ ಬಸವರಾಜ್ ಗೆ ಶಾಕ್: ಸುಪ್ರೀಂನಲ್ಲೂ ಜಾಮೀನು ಅರ್ಜಿ ವಜಾ BDA JK_Adv BDA Adv
Home Front Page ಶಾಸಕ ಭೈರತಿ ಬಸವರಾಜ್ ಗೆ ಶಾಕ್: ಸುಪ್ರೀಂನಲ್ಲೂ ಜಾಮೀನು ಅರ್ಜಿ ವಜಾ

ಶಾಸಕ ಭೈರತಿ ಬಸವರಾಜ್ ಗೆ ಶಾಕ್: ಸುಪ್ರೀಂನಲ್ಲೂ ಜಾಮೀನು ಅರ್ಜಿ ವಜಾ

ನವದೆಹಲಿ,ಫೆಬ್ರವರಿ,12,2026 (www.justkannada.in):  ರೌಡಿಶೀಟರ್ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನಿರೀಕ್ಷಣಾ ಜಾಮೀನು ಕೋರಿ  ಶಾಸಕ ಭೈರತಿ ಬಸವರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ನಿಯಮಿತ ಜಾಮೀನಿಗೆ ಅರ್ಜಿ ಹಾಕಿ ಎಂದು ತಿಳಿಸಿದೆ. ಬಂಧನ ಭೀತಿಯಿಂದ ತಲೆಮರಿಸಿಕೊಂಡಿರುವ ಶಾಸಕ ಭೈರತಿ ಬಸವರಾಜು ವಿದೇಶದಲ್ಲೇ ಕುಳಿತೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಶಾಸಕ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಭೈರತಿ ಬಸವರಾಜು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Key words: MLA, Bhairati Basavaraj, Bail application, rejected, Supreme Court