Friday, August 14, 2026

BDA Apartments

Home Front Page ನನಗೆ ಈಗಲೂ ಭರವಸೆ ಇದೆ: ಸಿಎಂ ಕೊಟ್ಟ ಮಾತು ಉಳಿಸಿಕೊಳ್ತಾರೆ- ಡಿಕೆ ಸುರೇಶ್

ನನಗೆ ಈಗಲೂ ಭರವಸೆ ಇದೆ: ಸಿಎಂ ಕೊಟ್ಟ ಮಾತು ಉಳಿಸಿಕೊಳ್ತಾರೆ- ಡಿಕೆ ಸುರೇಶ್

ಬೆಂಗಳೂರು,ಫೆಬ್ರವರಿ,11,2026 (www.justkannada.in): ನನಗೆ ಈಗಲೂ ಭರವಸೆ ಇದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾರೆ. ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾರೆ ನನಗೆ ಈಗಲೂ ಭರವಸೆ ಇದೆ. ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದರು.

ಕೆಲ ಶಾಸಕರಿಂದ ವಿದೇಶಿ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್,  ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಆಯೋಜನೆ ಮಾಡಿದ್ದಲ್ಲ. ವಿದೇಶ ಪ್ರವಾಸಕ್ಕೂ ಡಿಕೆ ಶಿವಕುಮಾರ್ ಗೂ ಸಂಬಂಧವಿಲ್ಲ. ಅದನ್ನ ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ಈ ಬಗ್ಗೆ ವಿದೇಶ ಪ್ರವಾಸದ ಆಯೋಜಕರನ್ನೇ ಕೇಳಿ. ಯಾರು ವಿದೇಶ ಪ್ರವಾಸ ಹೋಗುತ್ತಿದ್ದಾರೆ ಅವರನ್ನೇ ಕೇಳಬೇಕು ಎಂದರು.

Key words: hope, CM Siddaramaiah, keep, his promise, DK Suresh