ಬೆಂಗಳೂರು, ಫೆಬ್ರವರಿ ,7,2026 (www.justkannada.in): ಬಿಹಾರಕ್ಕೆ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸೋಲದೇವನಹಳ್ಳಿ (Bengaluru rural)ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಗಪ್ರಸನ್ನ, ತಾಯಿ ಸುಮಂಗಲಾ(78), ಸಹೋದರಿ ಶಿಲ್ಪಾ(48), ಶ್ರುತಾ (43) ಆತ್ಮಹತ್ಯೆಗೆ ಶರಣಾದವರು.
ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾವ ನಾಗಪ್ರಸಾದ್ ಕೊಲೆ ಮಾಡಿದ್ದರು. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತ ಶರೀರಗಳ ಬಳಿ ನಿದ್ದೆ ಮಾತ್ರೆಗಳು ಸಿಕ್ಕಿದ್ದು, ಈ ಮಾತ್ರೆಗಳ ಓವರ್ ಡೋಸ್ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.
ಬಾಲಕ ಅಮೋಘಕೀರ್ತಿ ಮೊಬೈಲ್ ನಲ್ಲಿ ಫ್ರೀಫೈರ್ ಗೇಮ್ ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ. ಘಟನೆಯ ಬಳಿಕ ಹಣದ ಕೊರತೆಯಿಂದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಕಾಲ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದನು. ಪೊಲೀಸರು ಆತನ ಮೇಲೆ ಎಫ್ಐಆರ್ ದಾಖಲಿಸಿ ಜೈಲಿನಲ್ಲಿಟ್ಟಿದ್ದರು.
ಬಳಿಕ ಆತನ ತಂಗಿ ಶಿಲ್ಪಾ ಬೇಲ್ ಮೂಲಕ ಅಣ್ಣನನ್ನು ಜೈಲಿನಿಂದ ಹೊರ ತಂದಿದ್ದರು. ಬಾಲಕ ಸಾವಿನಿಂದ ನೊಂದಿದ್ದ ಕುಟುಂಬದವರು ಬಿಹಾರದ ಪ್ರವಾಸ ಕೈಗೊಂಡಿದ್ದರು. ಇದೀಗ ಬಿಹಾರದಲ್ಲಿ ನಾಲ್ವರೂ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
Key words: Four members, family, Karnataka, commit suicide, Bihar







