ಬೆಂಗಳೂರು,ಫೆಬ್ರವರಿ,2,2026 (www.justkannada.in): ವಿಧಾನಮಂಡಲ ಅಧಿವೇಶನದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಈ ಸಂಬಂಧ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ ಆರ್.ಅಶೋಕ್, ಈ ಹಿಂದೆ ನೀವು 14 ಸಾವಿರ ಕೋಟಿ ರೂ. ಉಳಿಸಿಕೊಂಡಿದ್ರಿ. ಅದನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ತೀರಿಸಿದವು. ಸರ್ಕಾರಗಳು ಬದಲಾದಾಗ ಗುತ್ತಿಗೆದಾರರ ಬಿಲ್ ಬಾಕಿ ಇರುತ್ತೆ ಎಂದರು.
ಈ ಹಿಂದೆ ನಮ್ಮ ಸರ್ಕಾರದ ವಿರುದ್ದ 40% ಆರೋಪ ಮಾಡಿದ್ರಿ. ಆಗ ನೀವು 40% ಕಮಿಷನ್ ಪೋಸ್ಟ್ ಹಾಕಿದ್ದೀರಿ ಯಾವ ಗೋಡೇನೂ ಬಿಡದೇ ಅಂಟಿಸಿದ್ದೇ ಅಂಟಿಸಿದ್ದು. ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಡಿಕೆ ಶಿವಕುಮಾರ್ರನ್ನು ಜೋಡೆತ್ತು ಅಂತಿದ್ದರು. ಈಗ ಕುಂಟೆತ್ತುಗಳಾಗಿವೆ ಎಂದು
ಇದೇ ವೇಳೆ ಮುಡಾ ಹಗರಣ ಬಗ್ಗೆಯೂ ಆರ್.ಅಶೋಕ್ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಮುಡಾ ಮುಡಾ ಅಂತ ಪಾದಯಾತ್ರೆ ಮಾಡಿದ್ರಿ ಈಗ ಹೇಳಿ ಏನಾಯಿತು. ಎಲ್ಲಾ ಕೋರ್ಟ್ ಗಳಲ್ಲೂ ಆ ಪ್ರಕರಣ ಬಿದ್ದು ಹೋಯಿತು ಎಂದು ಭೈರತಿ ಸುರೇಶ್ ಟಾಂಗ್ ಕೊಟ್ಟರು.
Key words: pending, contractor, bills, R. Ashok, Session







