ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಮೈಸೂರಿನ ವಿದ್ಯಾರ್ಥಿಗೆ ಪ್ರಥಮ ಬಹುಮಾನ

ಮೈಸೂರು,ಜನವರಿ,30,2026 (www.justkannada.in): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ  ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಟಿ.ನರಸಿಪುರ ತಾಲ್ಲೂಕಿನ ಜಿ.ಹೆಚ್.ಎಸ್ ಮೇದಿನಿ ಶಾಲೆಯ ಸಿದ್ದರಾಜು ಪ್ರಥಮ ಸ್ಥಾನ  ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯ ಮಟ್ಟದಲ್ಲೂ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದಾರೆ‌.

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿ ಅವರ ಪಾತ್ರ ಕುರಿತು ಬರೆದ ಪ್ರಬಂಧ  ಆಯ್ಕೆಯಾಗಿದ್ದು, ಇವರಿಗೆ ರೂ 31,000 ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.

ವಾರ್ತಾ ಇಲಾಖೆಯ ಉಪನಿರ್ದೇಶಕರು ಸಿಬ್ಬಂದಿಗಳು  ವಿದ್ಯಾರ್ಥಿ ಸಿದ್ದರಾಜುಗೆ ಶುಭಾಶಯಗಳನ್ನು ಕೋರಿದ್ದು,  ಶಾಲಾ ಮುಖ್ಯೋಪಾಧ್ಯಾಯರಾದ ಶಿವನಂಜು ಬಿ ಹಾಗೂ ವಿದ್ಯಾರ್ಥಿಯನ್ನು ಮಾರ್ಗದರ್ಶನ ಮಾಡಿದ  ಕನ್ನಡ ಭಾಷಾ ಶಿಕ್ಷಕರಾದ ಸುರೇಶ್ ಕುಮಾರ್ ಜಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Key words: State-level, essay competition, First prize,  Mysore student