ಮುಂಬೈ,ಜನವರಿ,28,2026 (www.justkannada.in): ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಪತನವಾಗಿ ಅಜಿತ್ ಪವಾರ್ ಸೇರಿ ಇತರ ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಚುನಾವಣೆ ಪ್ರಚಾರಕ್ಕೆ ಎಂದು ತೆರಳುವಾಗ ವಿಮಾನ ಪತನವಾಗಿದೆ ಎನ್ನಲಾಗಿದೆ. ಮುಂಬೈನಿಂದ ಬಾರಾಮತಿಗೆ ಪ್ರಯಾಣ ಮಾಡಿದ್ದ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಪತನವಾಗಿದೆ.
66 ವರ್ಷದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಜೊತೆಗೆ ಓರ್ವ ಸಹಾಯಕ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ದುರಂತ ಸಂಭವಿಸಿದ ವಿಮಾನ ನಿಲ್ದಾಣದಲ್ಲಿ ಇದೀಗ ವಿಮಾನಗಳ ಹಾರಾಟ ಬಂದ್ ಮಾಡಿ, ಬೆಂಕಿ ನಂದಿಸುವ ಕೆಲಸ ನಡೆಸಲಾಗಿದೆ.
Key words: Maharashtra, DCM, Ajit Pawar, dies, private plane, crash







