Wednesday, July 29, 2026

BDA Apartments

Home Front Page ಡಾ.ವಿಜಯಾ ದಬ್ಬೆ ಸ್ಮರಣಾರ್ಥ ರಾಜ್ಯಮಟ್ಟದ ಲಲಿತ ಪ್ರಬಂಧ, ಕವನ ಸ್ಪರ್ಧೆ ಆಯೋಜನೆ

ಡಾ.ವಿಜಯಾ ದಬ್ಬೆ ಸ್ಮರಣಾರ್ಥ ರಾಜ್ಯಮಟ್ಟದ ಲಲಿತ ಪ್ರಬಂಧ, ಕವನ ಸ್ಪರ್ಧೆ ಆಯೋಜನೆ

ಮೈಸೂರು,ಜನವರಿ,27,2026 (www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ ರಾಜ್ಯಮಟ್ಟದ ಲಲಿತ ಪ್ರಬಂಧ ಸ್ಪರ್ಧೆ  ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಿದೆ.

ಲಲಿತ‌ ಪ್ರಬಂಧ ಸ್ಪರ್ಧೆಯಲ್ಲಿ 20 ರಿಂದ 40 ವಯೋಮಾನದ ಲೇಖಕಿಯರು, ಕವನ ಸ್ಪರ್ಧೆಗೆ 20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವ ಜನರು‌ ಭಾಗವಹಿಸಬಹುದು.

ನಿಯಮಗಳು:  ಲಲಿತ ಪ್ರಬಂಧ ಪದಮಿತಿ 1,500 ಪದಗಳು.  ಕವನ ಸ್ಪರ್ಧೆಗೆ ಒಂದು‌ ಕವನ ಕಳುಹಿಸಬೇಕು.  ಈ ಮೊದಲು ಎಲ್ಲಿಯೂ ಪ್ರಸಾರ/ ಪ್ರಕಟ ಆಗಿರಬಾರದು. ವಯಸ್ಸಿನ ಖಚಿತತೆಗೆ ಎಸ್ಎಸ್ ಎಲ್ ಸಿ ಅಂಕಪಟ್ಟಿ ಅಥವಾ ಆಧಾರ್ ಲಗತ್ತಿಸಬೇಕು.

ಎರಡೂ ಸ್ಪರ್ಧೆಗಳಿಗೆ ಒಂದೇ ಮೊತ್ತದ (ಪ್ರಥಮ ರೂ. 5 ಸಾವಿರ , ದ್ವಿತೀಯ  ರೂ. 3 ಸಾವಿರ, ತೃತೀಯ ರೂ. 2 ಸಾವಿರ ) ಪ್ರತ್ಯೇಕ ಬಹುಮಾನಗಳಿರುತ್ತವೆ. ವಿಜೇತರು ಮತ್ತು ತೀರ್ಪುಗಾರರ  ಮೆಚ್ಚುಗೆ ಪಡೆಯುವ ತಲಾ ಹತ್ತು ಸ್ಪರ್ಧಿಗಳಿಗೆ  ಮೇ  ಕೊನೆಯ ವಾರ ಒಂದು ದಿನದ ಸಾಹಿತ್ಯ ಕಮ್ಮಟ ಆಯೋಜಿಸಲಾಗುವುದು.

ಕತೆ, ಕವನಗಳನ್ನು ಹಾಳೆಯ ಒಂದು ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ ಟೈಪ್ ಮಾಡಿ, ಪ್ರತ್ಯೇಕ ಹಾಳೆಯಲ್ಲಿ ಹೆಸರು , ವಿಳಾಸ, ಫೋನ್ ಸಂಖ್ಯೆ,ಇ – ಮೇಲ್ ವಿವರ  ನಮೂದಿಸಿ 15.03.2026 ರ ಒಳಗೆ ಕಳಿಸಬೇಕು.

ವಿಳಾಸ: ಶ್ರೀಮತಿ ವಿಜಯಾ ರಾವ್, ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ  ಹಂತ, ಮೈಸೂರು. ಪಿನ್: 570017. ಫೋನ್: 98454 22855.

Key words: State-level, essay, poetry, competition, Dr. Vijaya Dabbe