ಎಲ್ಲಾ ಗ್ರಾ.ಪಂಗಳಿಗೆ ಗಾಂಧಿ ಹೆಸರು ಇಡುತ್ತೇವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜನವರಿ,27,2026 (www.justkannada.in):  ಎಲ್ಲಾ ಗ್ರಾಮಪಂಚಾಯತ್ ಗಳಿಗೆ ಮಹಾತ್ಮ ಗಾಂಧಿ ಹೆಸರು ಇಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಕೇಂದ್ರ ಸರ್ಕಾರ ಮನ್ ರೇಗಾ ಯೋಜನೆಯ ಹೆಸರನ್ನ ವಿಬಿ ಜೀ ರಾಮ್ ಜೀ ಎಂದು ಬದಲಾವಣೆ ಮಾಡಿರುವುದನ್ನ ವಿರೋಧಿಸಿ ಕಾಂಗ್ರೆಸ್ ಲೋಕಭವನ ಚಲೋ ನಡೆಸಿ ಪ್ರತಿಭಟಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಮಹಾತ್ಮ ಗಾಂಧಿ ಹೆಸರು ಇಡುತ್ತೇವೆ. ಮನ್ ರೇಗಾ ಮರುಜಾರಿಗೆ ರಾಜ್ಯಪಾಲರು ಒತ್ತಡ ಹೇರಬೇಕು ಎಲ್ಲಾ ರಾಜ್ಯಗಳಲ್ಲೂ ಮನ್ ರೇಗಾ ಯೋಜನೆ ಮರು ಜಾರಿಯಾಗಬೇಕು. ಕೇಂದ್ರ ಸರ್ಕಾರ ಎಲ್ಲಾ ಗ್ರಾಮ ಪಂಚಾಯತ್ ಗಳ ಹಕ್ಕುಗಳನ್ನ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

Key words:  Grama Panchayath, Gandhi name, DCM, DK Shivakumar