ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ನಡೆದುಕೊಂಡ ಕ್ರಮ ಸರಿಯಲ್ಲ- ಶಿವಕುಮಾರ್

ಮೈಸೂರು,ಜನವರಿ,26,2026 (www.justkannada.in): ವಿಧಾನಮಂಡಲದ ಜಂಟಿ ಅಧಿವೇಶನದ ದಿನದಂದು ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ಕ್ರಮ ಕರ್ನಾಟಕದ ಇತಿಹಾಸದಲ್ಲಿ ನಡೆದ ಕರಾಳ ದಿನವಾಗಿದೆ. ಪ್ರಜಾಪ್ರಭುತ್ವದ ದೇವಾಲಯದಂತೆ ಇರುವ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ನಡೆದುಕೊಂಡ ರೀತಿ ನೋಡಿದರೆ ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು  ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಶಿವಕುಮಾರ್, ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಪ್ರಥಮ ಪ್ರಜೆ. ಅಂತಹವರನ್ನು ಅಗೌರವವಾಗಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್, ಕಾಲದಿಂದಲೂ ಸಾಂವಿಧಾನಿಕವಾಗಿ ಅಪಮಾನ ಮಾಡಿಕೊಂಡು ಬಂದಿರುವುದು ರಕ್ತಗತವಾಗಿ ಬಂದಿದೆ ಎಂದು ಟೀಕಿಸಿದ್ದಾರೆ. ರಾಜ್ಯಪಾಲರನ್ನು ಅಗೌರವವಾಗಿ ಮಾತ್ರ ನೋಡಿಲ್ಲ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮುಅವರನ್ನು ಸೋನಿಯಾಗಾಂಧಿ ಟೀಕಿಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರು ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರನ್ನು ಹೀಯಾಳಿಸಿದ್ದರು. ಮೊದಲಿನಿಂದಲೂ ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಬೆರಳು ತೋರಿಸಿ ಟೀಕೆ ಮಾಡಿದ್ದಾರೆ. ಹಲ್ಲೆಗೆ ಮುಂದಾಗಿದ್ದಾರೆ.  ಅವರು ಸದನದ ಸದಸ್ಯರಾಗಲು ಅರ್ಹರಲ್ಲ. ಇಂತಹವರನ್ನು ಅಮಾನತುಪಡಿಸಬೇಕು ಎಂದು  ಶಿವಕುಮಾರ್ ಒತ್ತಾಯಿಸಿದ್ದಾರೆ.

Key words:  Congress, Governor, Former mayer,  Shivakumar