ಮೈಸೂರು: MLC ಬಿಕೆ ಹರಿಪ್ರಸಾದ್ ಅಮಾನತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು,ಜನವರಿ,24,2026 (www.justkannada.in):  ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ  ರಾಜ್ಯಪಾಲರನ್ನ ತಡೆದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಬಿಜೆಪಿ ನಡೆಸಿತು.

ನಗರದ ರಾಮಸ್ವಾಮಿ ವೃತ್ತದ ಬಳಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಯಿತು. ಜಂಟಿ ಅಧಿವೇಶನದಿಂದ ತೆರಳುತ್ತಿದ್ದ ರಾಜ್ಯಪಾಲರನ್ನಕಾಂಗ್ರೆಸ್ ಎಂಎಲ್ ಸಿ  ಬಿ.ಕೆ ಹರಿಪ್ರಸಾದ್  ತಡೆದಿದ್ದನ್ನ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಬಿಕೆ ಹರಿಪ್ರಸಾದ್ ವಿರುದ್ದ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು.

ಹಾಗೆಯೇ ಬಿಜೆಪಿ ಹರಿಪ್ರಸಾದ್  ರವರನ್ನು ಕೂಡಲೇ ಅಮಾನತು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

Key words:  Mysore,  BJP, protests,  suspension, MLC, BK Hariprasad