ಹುಬ್ಬಳ್ಳಿ,ಜನವರಿ,24,2026 (www.justkannada.in): ರಾಜ್ಯ ಸರ್ಕಾರ ಹಣವಿಲ್ಲದೆ ಅಬಕಾರಿ ಇಲಾಖೆಯಿಂದ ಹಣ ಸಂಗ್ರಹಿಸಲು ಹೊರಟಿದೆ. ಈ ಮೂಲಕ ಸರ್ಕಾರ ಐದು ಗ್ಯಾರಂಟಿ ಜೊತೆ ಲಿಕ್ಕರ್ ಗ್ಯಾರಂಟಿಯನ್ನೂ ಕೊಡಲು ಹೊರಟಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆಯೆ ಲಿಕ್ಕರ್ ಗ್ಯಾರಂಟಿ ಆಗಿದೆ. ಸರ್ಕಾರದ ಆದಾಯ ಕಡಿಮೆ ಆಗಿದೆ. ಆದಾಯ ಹೆಚ್ಚಿಸಲು ಸರ್ಕಾರ ಲಿಕ್ಕರ್ ಮಾರಾಟಕ್ಕೆ ಪ್ರಚೋದನೆ ನೀಡುತ್ತಿದೆಯಾ? ಎಂದು ಪ್ರಶ್ನಿಸಿದರು
ಹುಬ್ಬಳ್ಳಿಯಲ್ಲಿ ಇಂದು ಕೊಳಗೇರಿ ಮಂಡಳಿಯಿಂದ 42 ಸಾವಿರ ಮನೆ ಮತ್ತು ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಮಾಡುತ್ತಿದೆ. ಅಬಕಾರಿ ಇಲಾಖೆ ಹುಬ್ಬಳ್ಳಿ ರೇಂಜ್ 1 ಗ್ರೂಪ್ ನಲ್ಲಿ ಇಂದು ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಕಾರ್ಯಕ್ರಮ ಇದೆ. ಇದಕ್ಕೆ ಒಂದೂವರೆಯಿಂದ ಎರಡು ಲಕ್ಷ ಜನ ಸೇರುತ್ತಾರೆ. ಹುಬ್ಬಳ್ಳಿಯ ಎಲ್ಲ ಮದ್ಯದ ಅಂಗಡಿಗಳು ಹೆಚ್ಚಿನ ಸಾರಾಯಿ, ಬೀರು ಮಾರಾಟ ಮಾಡುವಂತೆ ಸಂದೇಶ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರ ಮನೆಗಳನ್ನು ವಿತರಣೆ ಮಾಡುತ್ತಿದ್ದೆಯೊ ಅಥವಾ ಸಾರಾಯಿ ಮಾರಾಟ ಮಾಡುತ್ತಿದ್ದೇಯೋ ಎಂದು ವಾಗ್ದಾಳಿ ನಡೆಸಿದರು.
Key words: Liquor guarantee, five guarantees, government, BJP, MLA







