Wednesday, September 9, 2026

BDA Apartments

Home Crime ಕಾಲೇಜು ಬಸ್ ಡಿಕ್ಕಿ:  ಸ್ಥಳದಲ್ಲೇ ತಾಯಿ, ಮಗ ಇಬ್ಬರೂ ಸಾವು

ಕಾಲೇಜು ಬಸ್ ಡಿಕ್ಕಿ:  ಸ್ಥಳದಲ್ಲೇ ತಾಯಿ, ಮಗ ಇಬ್ಬರೂ ಸಾವು

ಬೆಂಗಳೂರು, ಜನವರಿ,19,2026 (www.justkannada.in):  ರಸ್ತೆ ದಾಟುತಿದ್ದ ವೇಳೆ ಕಾಲೇಜು ಬಸ್‌ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಅಶೋಕನಗರ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಈಜಿಪುರದ ನಿವಾಸಿ ಸಂಗೀತಾ (37) ಮತ್ತು ಇವರ ಪುತ್ರ ಪಾರ್ಥ (8) ಮೃತಪಟ್ಟವರು.  ಸಂಗೀತಾ ಅವರು ಆಡುಗೋಡಿ ಸಮೀಪದ ಆರ್ಮಿ ಪಬ್ಲಿಕ್‌ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಪುತ್ರ ಪಾರ್ಥನನ್ನು  ಕರೆದುಕೊಂಡು ಸಂಗೀತಾ ಅವರು ಶಾಲೆ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವಿವೇಕನಗರದ ಜಂಕ್ಷನ್‌ ಬಳಿ ಖಾಸಗಿ ಕಾಲೇಜಿನ ಬಸ್ ಇವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಬಳಿಕ ಬಸ್‌ ಚಾಲಕ  ಬಸ್ ನಿಲ್ಲಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಅಶೋಕನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: College bus, collision, Mother, son, Death