ರಾಜಕೀಯ ಉದ್ದೇಶದ ಬಿಜೆಪಿಯ ಪಾದಯಾತ್ರೆ ಹಾಸ್ಯಾಸ್ಪದ: ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಜನವರಿ,12,2026 (www.justkannada.in): ರಾಜಕೀಯ ಉದ್ದೇಶದಿಂದ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ. ಇದು ಹಾಸ್ಯಸ್ಪದ ಎಂದು  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಸಚಿವ ಹೆಚ್.ಸಿ ಮಹದೇವಪ್ಪ, ಬಿಜೆಪಿ ಸರ್ಕಾರದ ವೇಳೆ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು. ಯಾರ ಕೈಯಲ್ಲಿ ಸಂಪತ್ತು ಇತ್ತು ಎಂಬುದು ಗೊತ್ತಿದೆ. ರಾಜಕೀಯ ಉದ್ದೇಶಕ್ಕೆ ನಡೆಯುವ ಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಖಾಸಗಿ‌ ಕ್ಷೇತ್ರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ  ಹಲವರ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ‘ರಾಜ್ಯದಲ್ಲಿನ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು. ಇಲ್ಲವಾದರೆ ನಾವು ಏನು ಮಾಡಬೇಕೋ‌ ಮಾಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ವಿಚಾರದಲ್ಲಿ ಯಾರು ಬಂದರೂ ಚರ್ಚೆಗೆ ಸಿದ್ಧರಿದ್ದೇವೆ ಎಂದರು.

Key words: BJP, padayatre, political, purposes, Minister, H.C. Mahadevappa