ಸಿದ್ದರಾಮಯ್ಯ ನುಡುದಂತೆ ನಡೆದವರು,  ಕೊಟ್ಟ ಮಾತು ಈಡೇರಿಸಲಿ-ಕಾಂಗ್ರೆಸ್ ಶಾಸಕ

ಬೆಂಗಳೂರು,ಜನವರಿ,10,2026 (www.justkannada.in):  ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ಬಳಿಕ ಮಾತನಾಡುತ್ತೇನೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದವರು. ಅವರು ಕೊಟ್ಟ ಭರವಸೆ ಈಡೇರಿಸಲಿ ಎಂದು ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜ ಶಿವಗಂಗಾ, ಜನವರಿ 16ರ  ಬಳಿಕ ನಾನು ಮಾತನಾಡುತ್ತೇನೆ. ರಾಯರೆಡ್ಡಿ, ಕೆಎನ್ ರಾಜಣ್ಣ, ನಾನು ಯಾರೂ ಹೈಕಮಾಂಡ್ ಅಲ್ಲ. ಹೈಕಮಾಂಡ್ ಹೇಳುವ ಮಾತಿಗೆ ನಾವೆಲ್ಲರೂ ಬದ್ದ  ಎಂದರು.

ಕೆಎನ್ ರಾಜಣ್ಣ ನಿನ್ನೆ ನುಡದಂತೆ ನಡೆಯಬೇಕು ಅಂತಾ ಹೇಳಿದ್ದಾರೆ. ಹೈಕಮಾಂಡ್ ಮುಂದ ಏನಾದ್ರೂ ಒಪ್ಪಂದ ಆಗಿದ್ರೆ ಮಾತನಾಡಲಿ . ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ ಸಿದ್ದರಾಮಯ್ಯ ನುಡುದಂತೆ ನಡೆದವರು ಕೊಟ್ಟ ಭವರಸೆ ಈಡೇರಿಸಲಿ. ಏನಾದರೂ ಒಪ್ಪಂದ ಬದಲಾವಣೆ ಇದ್ದರೇ ಹೈಕಮಾಂಡ್ ಕರೆಯಬೇಕು. ಹೈಕಮಾಂಡ್ ಮಾತಿಗೆ ಬದ್ದ ಎಂದರು.

ಇನ್ನು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಅಸ್ಸಾಂ ಚುನಾವಣೆಗೆ ಡಿಕೆ ಶಿವಕುಮಾರ್ ರನ್ನು ನೇಮಿಸಿದ್ದಾರೆ ಎಂದು ಬಸವರಾಜ ಶಿವಗಂಗಾ ಹೇಳಿದರು.

Key words: CM, Siddaramaiah, fulfill, promises, Congress, MLA