Tuesday, October 13, 2026

Dasara Wishes

Happy Dasara
Home Front Page ನಾಯಕತ್ವ ಬದಲಾವಣೆ: ನಾನು ಇನ್ನೂ ಹೆಚ್ಚು ಗೊಂದಲ ಮಾಡಲು ತಯಾರಿಲ್ಲ-ಗೃಹ ಸಚಿವ ಪರಮೇಶ್ವರ್

ನಾಯಕತ್ವ ಬದಲಾವಣೆ: ನಾನು ಇನ್ನೂ ಹೆಚ್ಚು ಗೊಂದಲ ಮಾಡಲು ತಯಾರಿಲ್ಲ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಫೆಬ್ರವರಿ,26,2026 (www.justkannada.in):  ಪರಮೇಶ್ವರ್ ಮುಂದಿನ ಸಿಎಂ ಎಂದು ಅಭಿಮಾನಿಗಳು, ಬೆಂಬಲಿಗರೂ ಹೋದಲ್ಲೆಲ್ಲಾ ಘೋಷಣೆ ಕೂಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ನಾನು ಇನ್ನೂ ಹೆಚ್ಚು ಗೊಂದಲ ಮಾಡಲು ತಯಾರಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾಯಕತ್ವದ ಬಗ್ಗೆ ಈಗಾಗಲೇ ಸಾಕಷ್ಟು ಗೊಂದಲವಾಗಿದೆ.  ನಾನು ಇನ್ನೂ ಹೆಚ್ಚು ಗೊಂದಲ ಮಾಡಲು ತಯಾರಿಲ್ಲ. ಅನೇಕರು ನನ್ನನ್ನು ಕೇಳುತ್ತಾರೆ  ಅಭಿಮಾನಿಗಳು ಘೋಷಣೆ ಕೂಗುತ್ತಾರೆ ಇದಕ್ಕೆಲ್ಲಾ ಉತ್ತರ ಹೈಕಮಾಂಡ್ ಎಂದರು.

ನಾನು ಯಾವ ಲಾಬಿ ಮಾಡುತ್ತಿಲ್ಲ ದೆಹಲಿಗೂ ಹೋಗುತ್ತಿಲ್ಲ. ಹಿತೈಷಿಗಳಿಗೂ ಒಂದೆರೆಡು ಬಾರಿ ಹಾಗೆ ಮಾಡಬೇಡಿ ಎಂದಿದ್ದೇನೆ.  ಈ ಗೊಂದಲಕ್ಕೆ ನಾನು ಕೈಜೋಡಿಸಲು ಹೋಗಲ್ಲ ಎಂದು ಪರಮೇಶ್ವರ್  ತಿಳಿಸಿದ್ದಾರೆ.

Key words: Leadership change, confusion, Home Minister, Parameshwar