ಬೆಂಗಳೂರು,ಜನವರಿ,9,2026 (www.justkannada.in): ಡಿಸಿಎಂ ಹುದ್ದೆಗೆ ಕೊಂಬು ಇಲ್ಲ. ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲ. ಗೃಹಖಾತೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ , ಅವರ ಶಾಸಕರು ಇದ್ದಾರಲ್ಲ ಚರ್ಚೆ ಮಾಡಲು ಹೇಳಿ. ಅಸೆಂಬ್ಲಿ ಕರೆಯುತ್ತೇವೆ ಅಲ್ಲಿ ಚರ್ಚೆ ಮಾಡಲು ಹೇಳಿ ಎಂದು ಕಿಡಿಕಾರಿದರು.
ಮನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಎರಡು ದಿನ ವಿಶೇಷ ಅಧಿವೇಶನ ಕರೆಯಲು ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಚರ್ಚಿಸುತ್ತೇವೆ ಬಿಜೆಪಿಯವರು ಪ್ರಚಾರ ಮಾಡಲು ಹೊರಟಿದ್ದಾರೆ. ಬಿಜೆಪಿಯವರು ತಂದಿರುವ ಯೋಜನೆಗಳನ್ನ ಹೇಳಲಿ. ಈ ಕಾರ್ಯಕ್ರಮದಿಂದ ಜನರಗೆ ಏನಾಗುತ್ತೆ ಎಂದು ತಿಳಿಸುತ್ತೇವೆ ಎಂದರು.
Key words: DCM, DK Shivakumar, Union Minister, HDK , experience







