ಮದುವೆ ಮಾಡಲಿಲ್ಲ ಅಂತಾ ತಂದೆಯನ್ನೇ ಹತ್ಯೆಗೈದ ಪುತ್ರ

ಚಿತ್ರದುರ್ಗ,ಜನವರಿ,8,2026 (www.justkannada.in):  ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಪುತ್ರನೊಬ್ಬ ತನ್ನ ಜನ್ಮಕೊಟ್ಟ ತಂದೆಯನ್ನೇ  ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ಈ ಘಟನೆ  ನಡೆದಿದೆ. ಸಣ್ಣ ನಿಂಗಪ್ಪ (65) ಪುತ್ರನಿಂದಲೇ ಕೊಲೆಯಾದ ತಂದೆ. ಲಿಂಗರಾಜು ಎಂಬಾತನೇ ಈ ಕೃತ್ಯ ಎಸಗಿದ ಮಗ. ಮದುವೆ ಮಾಡಲಿಲ್ಲ ಎಂದು ತಂದೆ ಸಣ್ಣ ನಿಂಗಪ್ಪ ಜೊತೆ ನಿಂಗರಾಜು ಜಗಳ ಮಾಡಿದ್ದ

ತಂದೆ ಸಣ್ಣ ನಿಂಗಪ್ಪ ಮಲಗಿದ್ದಾಗ ರಾಡ್ ನಿಂದ ಹೊಡೆದು ಲಿಂಗರಾಜು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತಂದೆ-ಮಗನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Son, kills father, marriage