ಮೈಸೂರು,ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ : ಚಾ.ನಗರದ ನೂತನ ಡಿಸಿ ರೂಪ.

The state government has ordered the transfer of 25 IPS officers serving in various parts of the state. Among them, some officers serving in Mysore district have been transferred. Accordingly, the government has ordered the transfer of senior officers serving in Mysore, Mandya, Kodagu and Chamarajanagar districts to various places.

 

ಮೈಸೂರು, ಡಿ.೩೧,೨೦೨೫ : ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ ೨೫ ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಅವರಲ್ಲಿ ಮೈಸೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಅದರಂತೆ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಅಧಿಕಾರಿಗಳನ್ನು ಸರ್ಕಾರ ವಿವಿಧ ಸ್ಥಳಗಳಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.

ಮೈಸೂರು ಜಿಲ್ಲಾ ಎಸ್‌ಪಿ ಎನ್.ವಿಷ್ಣುವರ್ಧನ್ ಅವರನ್ನು ಡಿಐಜಿಗೆ ಪದೋನ್ನತಿ ನೀಡಿ ಅವರನ್ನು  ಕರ್ನಾಟಕ ಪೊಲೀಸ್‌ ಅಕಾಡೆಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಅವರ ಜಾಗಕ್ಕೆ ಮಲ್ಲಿಕಾರ್ಜುನ ಬಾಲದಂಡಿ ಅವರ ನೇಮಕವಾಗಿದೆ. ಮಂಡ್ಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶೋಭಾರಾಣಿ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.

ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಬಿಂದುಮಣಿ ಅವರನ್ನು ಕೊಡಗು ಜಿಲ್ಲಾ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಮಂಡ್ಯದ ಎಸ್‌ಪಿ ಆಗಿ ವಿ.ಜೆ.ಶೋಭಾರಾಣಿ ಅವರನ್ನು ನೇಮಕ ಮಾಡಲಾಗಿದೆ.

SHOBHARANAI, IPS

ಚಾಮರಾಜನಗರ ಎಸ್‌ಪಿ ಆಗಿದ್ದ ಬಿ.ಟಿ.ಕವಿತಾ ಅವರನ್ನು ರಾಜ್ಯ ಅಪರಾಧ ತನಿಖಾ ವಿಭಾಗದ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಮೈಸೂರು ಡಿಸಿಪಿ ಆಗಿದ್ದ ಎಂ.ಮುತ್ತುರಾಜ್ ಅವರನ್ನು ಚಾಮರಾಜನಗರ ಎಸ್‌ಪಿ ಆಗಿ ನೇಮಕ ಮಾಡಲಾಗಿದೆ.

ಚಾ.ನಗರ ನೂತನ ಸಾರಥಿ:

ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಶಿಲ್ಪಾನಾಗ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ರೂಪ (IAS) ನೇಮಕವಾಗಿದ್ದಾರೆ. ಜತೆಗೆ ಚಾಮರಾಜನಗರ ಜಿಲ್ಲೆಯ ಪೊಲೀಸ್‌ ವರಷ್ಠಾಧಿಕಾರಿ ಬಿ.ಟಿ.ಕವಿತಾ ಅವರನ್ನು ಬೆಂಗಳೂರು ಸಿಐಡಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಮುತ್ತುರಾಜು (IPS) ನೇಮಕಗೊಂಡಿದ್ದಾರೆ.

key words:  Mysore, Cha. Nagar, Mandya, Kodagu SPs: New DC form of Cha. Nagar.

SUMMARY:

Mysore, Chamaraja Nagar, Mandya, Kodagu SPs: New DC form of Chamaraja Nagar.

The state government has ordered the transfer of 25 IPS officers serving in various parts of the state. Among them, some officers serving in Mysore district have been transferred.

Accordingly, the government has ordered the transfer of senior officers serving in Mysore, Mandya, Kodagu and Chamarajanagar districts to various places.