ಬೆಂಗಳೂರು,ಡಿಸೆಂಬರ್,27,2025 (www.justkannada.in): ಜಿಕೆವಿಕೆಯಲ್ಲಿ ನಡೆದ ರೈತಸಂತೆ ಮತ್ತು ರೈತ ದಿನಾಚರಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿದಿರು ಬೊಂಬಿನಿಂದ ಕೊಳಲು ಮಾಡ್ತಾರೆ. ಕೊಳಲು ಇಡೀ ವಿಶ್ವಕ್ಕೆ ಪರಿಚಯ. ಕುರಿ ಕೋಣದ ಚರ್ಮದಿಂದ ತಮಟೆ ಮಾಡುತ್ತೇವೆ. ಸಗಣಿ ಬಿಸಾಕುತ್ತೇವೆ ಹುಲ್ಲು ಸೇರಿಸಿದ್ರೆ ಪಿಳ್ಳಾರತಿ ಆಗುತ್ತೆ. ಬೆವರು ಶ್ರಮಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ದೀಪದ ಬೆಳಕು ಮಾತ್ರ ಗೊತ್ತಾಗುತ್ತದೆ. ಆದರೆ ದೀಪದ ಕಷ್ಟ ಗೊತ್ತಾಗಲ್ಲ ಎಂದು ಹೇಳಿದರು.
ಭೂಮಿ ಅಂತ ಮಾಜಿ ಸಿಎಂ ಎಸ್.ಎಂ ಕೃಷ್ಣ ಕಾಲದಲ್ಲಿ ಮಾಡಿದ್ವಿ. ದೊಡ್ಡ ಕ್ರಾಂತಿಕಾರಕ ಬದಲಾವಣೆ ಮಾಡಿದ್ದವು. 53 ಸಾವಿರ ಕೋಟಿ ವೆಚ್ಚದ ಗ್ಯಾರಂಟಿ ಯೋಜನೆಗಳು ಕೊಟ್ಟಿದ್ದೇವೆ. ನಾವು ಇರೋದೇ ನಿಮಗಾಗಿ ನೀವು ಇರೋದೇ ನಮಗಾಗಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Key words: GKVK, Farmers’ Day, DCM, DK Shivakumar







