Sunday, September 27, 2026

BDA Apartments

ಬುಲ್ಡೋಜರ್ ಪದ್ದತಿ ಬಳಕೆ ಆರೋಪ: ಕೇರಳ ಸಿಎಂಗೆ ಡಿಕೆ ಶಿವಕುಮಾರ್ ತಿರುಗೇಟು BDA J...
Home Front Page ಬುಲ್ಡೋಜರ್ ಪದ್ದತಿ ಬಳಕೆ ಆರೋಪ: ಕೇರಳ ಸಿಎಂಗೆ ಡಿಕೆ ಶಿವಕುಮಾರ್ ತಿರುಗೇಟು

ಬುಲ್ಡೋಜರ್ ಪದ್ದತಿ ಬಳಕೆ ಆರೋಪ: ಕೇರಳ ಸಿಎಂಗೆ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು,ಡಿಸೆಂಬರ್,27,2025 (www.justkannada.in):  ಬೆಂಗಳೂರಿನ  ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆ ಈ ಬಗ್ಗೆ ಟೀಕಿಸಿ ಕರ್ನಾಟಕ ಸರ್ಕಾರ ಬುಲ್ಡೋಜರ್  ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ನಾವು ಬುಲ್ಡೋಜರ್ ಪದ್ದತಿ ಬಳಸಿಲ್ಲ. ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜಕೀಯ ಮಾಡೋದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇರಳ ಸಿಎಂ ವಾಸ್ತವ ಅರ್ಥ ಮಾಡಿಕೊಳ್ಳದೆ ಮಾತನಾಡಿದ್ದಾರೆ. ಕೆಲವರು ಡಂಪ್ ಸೈಟ್ ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು ನಮ್ಮ ಶಾಸಕರು ಅಧಿಕಾರಿಗಳು ಅದನ್ನ ತೆರವು ಮಾಡಿದ್ದಾರೆ. ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಮನೆ ಕಳೆದುಕೊಂಡವರಿಗೆ ನಾವು ಮನೆ ಹಂಚಿಕೆ ಮಾಡುತ್ತೇವೆ.  ರಾಜೀವ್ ಗಾಂಧಿ ವಸತಿ ನಿಗಮ ಮೂಲಕ ಮನೆ ಹಂಚುತ್ತೇವೆ.  ನಾವು ಬುಲ್ಡೋಜರ್ ಪದ್ದತಿ ಬಳಸಿಲ್ಲ.  ಈ ಕುರಿತು ನಮ್ಮ ಪಕ್ಷದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರು ಇಲ್ಲಿನ ಸ್ಥಿತಿ ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರಿ ಜಾಗ  ಒತ್ತುವರಿಗೆ ನಾನು ಬಿಡಲ್ಲ. ಚುನಾವಣೆ ವೇಳೆ ಪಿಣರಾಯಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಸ್ಲಂ ಮಾಡುವುದಕ್ಕೆ ಬಿಡಲ್ಲ ಎಂದು  ಡಿಕೆ ಶಿವಕುಮಾರ್ ಹೇಳಿದರು.

Key words: Alleged, bulldozer, Kerala CM, Pinarayi vijayan, DK Shivakumar