ಮೈಸೂರು,ಡಿಸೆಂಬರ್,26,2025 (www.justkannada.in): ನಿನ್ನೆ ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ವಿಜ್ಞಾನಿ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಅವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರೊ. ಕೆ.ಎಸ್ ರಂಗಪ್ಪ, ಹೀಲಿಯಂ ಅನ್ನೋದು ಇನ್ನರ್ ಗ್ಯಾಸ್. ಸಹಜವಾಗಿ ಹೀಲಿಯಂ ಸಿಲಿಂಡರ್ ಗಳು ಸ್ಪೋಟಗೊಳ್ಳಲ್ಲ . ಇದು ಬಹಳ ಅಪರೂಪ. ಅಧಿಕ ಒತ್ತಡದಲ್ಲಿ( High Pressure) ಗ್ಯಾಸ್ ಫಿಲ್ ಮಾಡಿರುತ್ತಾರೆ. ಈ ವೇಳೆ ಒತ್ತಡವನ್ನು ತಡೆಯಲು ಆಗದಿದ್ದಾಗ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ . ಕೆಲವು ಸಾರಿ ಹೈಡ್ರೋಜನ್ ಗ್ಯಾಸ್ ಜತೆ ಕಲುಷಿತವಾಗಿದ್ದರೆ ಇಂತಹ ವೇಳೆ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಸಿಲಿಂಡರ್ ಗೆ ಹೀಲಿಯಂ ಅನ್ನು ಅಧಿಕ ಒತ್ತಡದಲ್ಲಿ ತುಂಬಬೇಕು. ಈ ವೇಳೆ ವ್ಯತ್ಯಾಸ ಮಾಡಿದರೆ ಮಾತ್ರ ಈ ರೀತಿ ಸಿಲಿಂಡರ್ ಸ್ಪೋಟಗೊಳ್ಳಲು ಸಾಧ್ಯತೆ ಇರುತ್ತದೆ. ನನ್ನ ದೃಷ್ಠಿಯಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ತುಂಬುವ ವೇಳೆ ಏನೋ ಕಾಂಟಾಮಿನೆಟ್ ಆಗಿದೆ. ಸಿಲಿಂಡರ್ ಏನಾದರೂ ಹೈಡ್ರೋಜನ್ ಗ್ಯಾಸ್ ಮಿಕ್ಸ್ ಆಗಿದ್ದರೇ ಇದು ಸಾಧ್ಯತೆ ಇದೆ ಎಂಬುದು ನನ್ನ ಊಹೆ ಎಂದು ಕೆ.ಎಸ್ ರಂಗಪ್ಪ ಹೇಳಿದ್ದಾರೆ.
ಈ ಸಿಲಿಂಡರ್ ನಲ್ಲಿ ಹೈಡ್ರೋಜನ್ ಗ್ಯಾಸ್ ಮಿಕ್ಸ್ ಆಗಿ ಈ ರೀತಿ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಕೆ.ಎಸ್ ರಂಗಪ್ಪ ತಿಳಿಸಿದ್ದಾರೆ.
Key words: Mysore, helium cylinder, explosion, Prof. K. S. Rangappa







