ಬೆಂಗಳೂರು,ಡಿಸೆಂಬರ್,26,2025 (www.justkannada.in): ಅಹಿಂದ ಮತಗಳು ಬೀಳುತ್ತವೆ ಎನ್ನುವುದಾಗಿದ್ದರೇ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದಾಗಿತ್ತು. ಆದರೆ ಏಕೆ ನಿಮ್ಮ ಮಗನ ಕ್ಷೇತ್ರವನ್ನು ಖಾಲಿ ಮಾಡಿಸಿ ವರುಣಾದಲ್ಲಿ ಸ್ಪರ್ಧೆ ಮಾಡಿದ್ರಿ? ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಟಾಂಗ್ ಕೊಟ್ಟರು.
ಇಂದು ಮಾಧ್ಯಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ಅಹಿಂದ ವ್ಯಾಖ್ಯಾನ ಮಾಡಲು ನನಗೆ ಕಷ್ಟವಾಗುತ್ತದೆ. ಅಹಿಂದ ಹೇಳಲು ಸ್ವಲ್ಪ ತಡವರಿಸುತ್ತೇವೆ. ಹೇಳುವುದು ಸಹ ಕಷ್ಟ ಆಗಿದೆ. ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಕೊಟ್ಟವರು ಯಾರು? ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ಕೊಟ್ಟಿದ್ದೇನೆ. ನಾಯಕ ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ಯಾರು? ಸಿದ್ದರಾಮಯ್ಯ ಅವರನ್ನು ನಾವು ಗುರುತಿಸಿದ್ದೇವೆ ಅಂತ ಹೇಳುವುದಿಲ್ಲ. ನನ್ನ ಬಗ್ಗೆ ಅವರು ಎಷ್ಟಾದರೂ ಟೀಕೆ ಮಾಡಲಿ. ಸಿದ್ದರಾಮಯ್ಯ ಮೊದಲ ಮಗ ಮೃತಪಟ್ಟಾಗ ನಾನು ಮನೆಗೆ ಹೋಗಿದ್ದೆ ಸಿಎಂ ಸಿದ್ದರಾಮಯ್ಯನವರ ಎರಡನೇ ಮಗ ಡಾಕ್ಟರ್ ಆಗಿದ್ದಾರೆ ಯಾವ ಲೇಬಲ್ ಇಟ್ಟುಕೊಂಡು ಅಹಿಂದ ಅಂದ ಮಾತನಾಡುತ್ತೀರಿ? ಎಂದು ವಾಗ್ದಾಳಿ ನಡೆಸಿದರು.
ಕಳೆದ ಚುನಾವಣೆಯಲ್ಲಿ ಕೋಲಾರ ಬಾದಾಮಿ ಹೀಗೆ ಎಲ್ಲಿ ನಿಲ್ಲಬೇಕು ಎಂದು ಸಿದ್ದರಾಮಯ್ಯನವರು ಚರ್ಚಿಸಿದ್ದರು. ಅಹಿಂದ ಮತಗಳು ಬೀಳುತ್ತವೆ ಅಂದರೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದಾಗಿತ್ತು ಏಕೆ ನಿಮ್ಮ ಮಗನ ಕ್ಷೇತ್ರವನ್ನು ಖಾಲಿ ಮಾಡಿಸಿ ನಂತರ ಅಲ್ಲಿ ಸ್ಪರ್ಧೆ ಮಾಡಿದ್ರಿ ಎಂದು ಪ್ರಶ್ನಿಸಿದರು.
Key words: Ahinda, votes, CM, Siddaramaiah, Former PM, HD Devegowda







