ಶಾಸಕ ಭೈರತಿ ಬಸವರಾಜು ಜಾಮೀನು ಅರ್ಜಿ ವಜಾ: ಬಂಧನ ಭೀತಿ

ಬೆಂಗಳೂರು,ಡಿಸೆಂಬರ್,23,2025 (www.justkannada.in):  ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜು ಅವರ ಜಾಮೀನು ಅರ್ಜಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಬಂಧನ ಭೀತಿಯಲ್ಲಿದ್ದ ಶಾಸಕ ಭೈರತಿ ಬಸವರಾಜು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ವಜಾಗೊಳಿಸಿ ಆದೇಶಿಸಿದೆ.

ತಲೆಮರಿಸಿಕೊಂಡಿರುವ  ಶಾಸಕ ಭೈರತಿ ಬಸವರಾಜು ಬಂಧನಕ್ಕೆ ಸಿಐಡಿ ಪೊಲೀಸರು 3 ವಿಶೇಷ ತಂಡಗಳನ್ನ ರಚನೆ ಮಾಡಿ ಬಲೆ ಬೀಸಿದ್ದಾರೆ. ಯಾವುದೇ ಕ್ಷಣದಲ್ಲಿ ಭೈರತಿ ಬಸವರಾಜು ಬಂಧನ ಸಾಧ್ಯತೆ ಇದೆ.

Key words: MLA, Bhairati Basavaraju, bail plea, dismissed, arrest, threatened