ಮಡಿಕೇರಿ ಡಿ.20,2025 : ಉರುಳಿಗೆ ಸಿಲುಕಿ 5 ವರ್ಷದ ಗಂಡು ಹುಲಿ ಮೃತಪಟ್ಟ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ. ಅರಣ್ಯದಿಂದ ಬಂದು ಚೆಟ್ಟಳ್ಳಿ ಗ್ರಾಮ ಪ್ರವೇಶಿಸಿದ್ದ ಹುಲಿ, ಉರುಳಿಗೆ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟ ಶಂಕೆ ವ್ಯಕ್ತ.
ಸ್ಥಳಕ್ಕೆ ಡಿಎಫ್‌ಓ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ವೈದ್ಯಾಧಿಕಾರಿಗಳಾದ ಡಾ.ಮುಜೀಬ್, ಡಾ.ಸಂಜೀವ್ ಆರ್.ಸಿಂಧೆ, ಮೀನುಕೊಲ್ಲಿ ಉಪವಲಯದ ಉಪವಲಯಾಧಿಕಾರಿ ಸಚಿನ್ ಲಿಂಬಾಳ್‌ಕರ್, ಗಸ್ತುವನ ಪಾಲಕ ನಾಗರಾಜು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಮತ್ತು ಆರ್‌ಆರ್‌ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಟ್ಟಳ್ಳಿ ಪೊಲೀಸ್ ಠಾಣಾ ಎಎಸ್‌ಐ ದಿನೇಶ್ ಮತ್ತು ಪೊಲೀಸ್ ಶ್ವಾನ ದಳ ತಂಡ ಕೂಡ ಸ್ಥಳ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನೂನು ಕ್ರಮ
ಅರಣ್ಯದ ಎಲ್ಲಾ ವಲಯಗಳಲ್ಲಿ ಸಿಬ್ಬಂದಿಗಳ ತಂಡಗಳನ್ನು ರಚಿಸಿ ಕಾಡಂಚಿನ ಗ್ರಾಮಗಳಲ್ಲಿ ಉರುಳಿನ ಶೋಧವನ್ನು ನಿಯಮಿತವಾಗಿ ನಡೆಸಬೇಕು ಮತ್ತು ಹುಲಿ ಸಾವಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬೆಳಗಾವಿಯಲ್ಲಿ ಸೂಚಿಸಿದ್ದಾರೆ.
key words: Tiger dies, after getting caught, in a snare, Madikeri, forest, Karnataka, Tiger

SUMMARY:
Tiger dies after getting caught in a snare

A 5-year-old male tiger died after getting trapped in a snare in Chettalli, Kushalnagar taluk. The tiger, which had entered Chettalli village from the forest, is suspected to have died after being seriously injured after getting trapped in a snare.





