ಮಂಡ್ಯ, ಡಿ.೧೮,೨೦೨೫: ರಸ್ತೆ ಅಪಘಾತದಲ್ಲಿ ಮಗನ ಮೆದಳು ನಿಷ್ಕ್ರಿಯ ಹಿನ್ನಲೆ. ಮಗನ ಸಾವಿನ ನೋವಲ್ಲೂ ಅಂಗಾಂಗ ದಾನ ಮಾಡಿ ಮಗನ ಸಾವಿನಲ್ಲಿ ಪೋಷಕರ ಸಾರ್ಥಕತೆ.
ಬೆಳಗೊಳದ ಗ್ರಾಮದ ಯುವಕ ಯಶ್ವಂತ್ (21) ಪೋಷಕರಿಂದ ಮಗನ ಅಂಗಾಂಗ ದಾನ ನಿರ್ಧಾರ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮ.
ಡಿ-13 ರಂದು KRS ರಸ್ತೆಯ ಮಂಟಿ ಬಳಿ ಬೈಕ್ ಗಳ ನಡುವೆ ಅಪಘಾತ. ಈ ಅಪಘಾತದಲ್ಲಿ ಯಶ್ವಂತ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು. ಆಸ್ಪತ್ರೆಯಲ್ಲಿ ವೈದ್ಯರಿಂದ ಮಗನ ಮೆದಳು ನಿಷ್ಕ್ರಿಯ ಮಾಹಿತಿ. ಮಗನ ಅಂಗಾಂಗದಿಂದ ಹಲವರಿಗೆ ಜೀವದಾನದ ಬಗ್ಗೆ ವೈದ್ಯರಿಂದ ಮಾಹಿತಿ. ಮಗನ ಅಂಗಾಂಗ ದಾನದಿಂದ ಹಲವರ ಜೀವನಕ್ಕೆ ಬೆಳಕಾಗಲು ಪೋಷಕರ ನಿರ್ಧಾರ.

ಅಪೋಲೋ ಆಸ್ಪತ್ರೆಯಲ್ಲಿ ಮೃತ ಮಗನ ಹಲವು ಅಂಗಾಂಗ ದಾನ. ಮಗನ ಅಂಗಾಂಗದಿಂದ ಹಲವರ ಬಾಳು ಬೆಳಕಾಗಲೆಂದು ಮೃತ ಯಶ್ವಂತ್ ಪೋಷಕರ ಹಾರೈಕೆ. ಇಂದು ದೇಹದ ಅಂಗಾಂಗ ಪಡೆದ ಬಳಿಕ ನಾಳೆ ಪೋಷಕರಿಗೆ ಯಶ್ವಂತ್ ಮೃತ ದೇಹ ಹಸ್ತಾಂತರ.
ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಪೋಷಕರ ನಿರ್ಧಾರಕ್ಕೆ ವೈದ್ಯರು ಸೇರಿ ಸಾರ್ವಜನಿಕರ ಮೆಚ್ಚುಗೆ.
key words: Son dies in accident, Parents’ sense of purpose, in son’s death, after donating organs.

SUMMARY:
Son dies in accident: Parents’ sense of purpose in son’s death after donating organs.

The son’s brain was paralyzed in a road accident. The parents’ sense of purpose in the death of their son by donating his organs despite the pain of his death. Yashwanth (21), a young man from Belagola village, decided to donate his son’s organs from his parents. Belagola village, Srirangapatna taluk, Mandya district.





