ರಾಮನಗರ,ಡಿಸೆಂಬರ್,12,2025 (www.justkannada.in): ಮಾಜಿ ಸಚಿವ ಕಾಂಗ್ರೆಸ್ ನಾಯಕ ಹೆಚ್ .ಎಂ ರೇವಣ್ಣನವರ ಪುತ್ರ ಶಶಾಂಕ್ ಒಡೆತನದ ಕಾರು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿ ಬಳಿ ನಡೆದಿದೆ.
27 ವರ್ಷದ ರಾಜೇಶ್ ಮೃತ ಯುವಕ. ರಾಜೇಶ್ ಮಾಗಡಿ ತಾಲ್ಲೂಕಿನ ಬೆಳಗುಂಬ ನಿವಾಸಿ. ತಡರಾತ್ರಿ ಕಾರು ಡಿಕ್ಕಿಯಾಗಿ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಮಾಗಡಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ.
ಕಾರನ್ನು ಹೆಚ್.ಎಂ ರೇವಣ್ಣ ಪುತ್ರ ಶಶಾಂಕ್ ಚಲಾಯಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: HM Revanna, son, Car, collides,bike, dies







