ಡಿ.18 ರಂದು ಪ್ರೊ. ಎಂ.ಕೃಷ್ಣೇಗೌಡರ ಕೃತಿಗಳ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ

ಮೈಸೂರು,ಡಿಸೆಂಬರ್,10,2025 (www.justkannada.in): ಅನಿಕೇತನ ಸೇವಾ ಟ್ರಸ್ಟ್, ವಿಸ್ಮಯ ಬುಕ್ ಹೌಸ್ ವತಿಯಿಂದ  ಡಿಸೆಂಬರ್ 18 ರಂದು  ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡರ ಕೃತಿಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಮೈಸೂರಿನ ಬೋಗಾದಿ ರಸ್ತೆ ವಾಕ್ ಶ್ರವಣ ಸಂಸ್ಥೆ ಎದುರಿನ ರೆಜೆಂಟಾ ಸೆಂಟ್ರಲ್ ಜವಾಜಿ ಹೋಟೆಲ್ ನಲ್ಲಿ ಸಂಜೆ 5.30ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರೊ.ಕೃಷ್ಣೇಗೌಡ ಅವರು ರಚಿಸಿರುವ  ‘ಹೊಳೆಯ ಮರಳು, ಹೊಂಗೆಯ ನೆರಳು, ಯಾಲಕ್ಕಿಗೊನೆ, ಅವರೆಯ ಸೊನೆ’ ಕೃತಿಗಳು ಲೋಕಾರ್ಪಣೆಯಾಗಲಿವೆ.

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಖ್ಯಾತ ಸಾಹಿತಿ ಚಲನಚಿತ್ರ ನಿರ್ದೇಶಕ ಡಾ ನಾಗತಿಹಳ್ಳಿ ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಶಿವಪ್ಪ ಆಗಮಿಸಲಿದ್ದಾರೆ.  ಕೃತಿ ಕುರಿತು ಭಾಷಾ ಸಂಸ್ಥಾನ ಮೈಸೂರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ತಳವಾರ ಮಾತನಾಡಲಿದ್ದಾರೆ.  ಸಾಹಿತಿ ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್,  ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್,  ಖ್ಯಾತ ಕಲಾವಿದ ಪ್ರಕಾಶ್  ಚಿಕ್ಕಪಾಳ್ಯ,   ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ ಶ್ರೀಧರ್,  ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬಿ.ಆರ್ ಶಿವಕುಮಾರ್ , ಶ್ರೀ ಕಾಲಭೈರವೇಶ್ವರ ಕನ್ ಸ್ಟ್ರಕ್ಷನ್ಸ್ ಮಾಲೀಕ ಕಡಕೊಳ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಇದೇ ವೇಳೆ ಕಾಲಭೈರವೇಶ್ವರ ಕನ್ ಸ್ಟ್ರಕ್ಷನ್ಸ್ ನ 2026ರ ದಿನದರ್ಶಿಕೆ ಬಿಡುಗಡೆಯಾಗಲಿದೆ.

Key words: December 18th, Prof. M. Krishnagowda, works, release, Program, Mysore