2ರಿಂದ 3 ತಿಂಗಳ ಹೆಣ್ಣು ಹುಲಿಮರಿಯ ರಕ್ಷಣೆ

ಹುಣಸೂರು,ಡಿಸೆಂಬರ್,6,2025 (www.justkannada.in): ನಾಗರಹೊಳೆಯ ಅಭಯ ಅರಣ್ಯಕ್ಕೆ ಹೊಂದಿಕೊಂಡಿರುವ ಗುರುಪುರ ಟಿಬೇಟಿಯನ್ ಕಾಲೋನಿಯ  ಜೆ. ವಿಲೇಜ್  ಬಳಿ ಸುಮಾರು ಹೆಣ್ಣು ಹುಲಿಮರಿ  ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಅದನ್ನು ರಕ್ಷಿಸಿದ್ದಾರೆ.

ಜೆ. ವಿಲೇಜ್  ಬಳಿ ಸುಮಾರು 2 ರಿಂದ 3 ತಿಂಗಳ  ಹೆಣ್ಣುಮರಿ  ಕಾಣಿಸಿಕೊಂಡಿತ್ತು.  ಹುಲಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದು,  ಕೂಡಲೇ  ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಡ್ರೋಣ್ ಬಳಸಿ ನೋಡಿ ಹುಲಿ ಮರಿಯನ್ನು  ಸೆರೆ ಹಿಡಿದರು.

ಅರಣ್ಯ ಇಲಾಖೆಯ ಎಸಿಎಫ್ ಲಕ್ಷ್ಮಿಕಾಂತ್  ಆರ್ ಎಫ್ ಒ ವಿನೋದ್ ಗೌಡ ಡಿಆರ್ ಎಫ್  ಒ ಮತ್ತು ಅಶೋಕ ಶಿವಕುಮಾರ್, ವೆಂಕಟೇಶ್ ಮತ್ತು ಅರಣ್ಯ ಇಲಾಖೆಯ ಇತರೆ ಸಿಬ್ಬಂದಿ  ಹುಲಿ ಮರಿಯನ್ನು ಸೆರೆ ಹಿಡಿದಿದ್ದು ಸುರಕ್ಷಿತವಾಗಿ ಸ್ಥಳಕ್ಕೆ ರವಾನಿಸಿದರು.

ಹುಲಿ ಮರಿಯು ಆರೋಗ್ಯವಾಗಿದ್ದು,  ದ್ರೋಣ್ ಸಹಾಯದಿಂದ ತಾಯಿಯ ಚಲನವಲನ ಗಮನಿಸಿದ ನಂತರ ತಾಯಿ – ಮರಿ ಸೇರ್ಪಡೆ ಕಾರ್ಯವನ್ನು ನಡೆಸಲಾಗುವುದು ಎಂದು  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ತಿಳಿಸಿದ್ದಾರೆ.

Key words: Protection, old female, tiger, cub, Hunsur