ಮೈಸೂರು,ಡಿಸೆಂಬರ್,3,2025 (www.justkannada.in): ಇತ್ತೀಚೆಗೆ ಬಿಡುಗಡೆಯಾದ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ 2026ರ ನೂತನ ಕ್ಯಾಲೆಂಡರ್ ಬಗ್ಗೆ ಓರಿಸ್ಸಾ ಹೈಕೋರ್ಟ್‌ನ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಅವರಿಗೆ ಲಾಗೈಡ್ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಹಾಗೂ ಹಿರಿಯ ವಕೀಲ ಎಚ್ ಎನ್ ವೆಂಕಟೇಶ್ ಲಾಗೈಡ್ ಕ್ಯಾಲೆಂಡರ್ ಹಾಗೂ ಡೈರಿ ನೀಡಿದರು.
ಈ ಬಾರಿ ಸುಪ್ರೀಂ ಕೋರ್ಟ್‌ನ ಪ್ರಮುಖ ಜಡ್ಜ್‌ಮೆಂಟ್ ಆಧಾರಿಸಿ ಮಾಡಲಾಗಿದ್ದ ಕ್ಯಾಲೆಂಡರ್ ವಿಷಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಯಾರ ಐಡಿಯಾ ಎಂದು ಕೇಳಿ ತಿಳಿದುಕೊಂಡ ಅವರು ಇದು ಎಚ್ ಎನ್ ವೆಂಕಟೇಶ್ ಪುತ್ರ ಹಾಗೂ ಕಾನೂನು ವಿದ್ಯಾರ್ಥಿಯಾಗಿರುವ ರೋಹನ್ ವಿ ಗಂಗಡ್ಕರ್ ಅವರ ಐಡಿಯಾ ಅಂತಾ ತಿಳಿದು ರೋಹನ್ ಕರೆದು ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ತುಂಬಾ ಉತ್ತಮವಾದ ವಿಷಯವನ್ನು ಆಯ್ಕೆ ಮಾಡಿದ್ದೀಯಾ ಎಂದು ಅಭಿನಂದಿಸಿದರು. ಇದರ ಜೊತೆಗೆ ಕ್ಯಾಲೆಂಡರ್ ನಲ್ಲಿ ವೆಬ್ ವಿಳಾಸ ಹಾಗೂ ಕ್ಯೂ ಆರ್ ಕೋಡ್ ಆಳವಡಿಸಿರುವ ತಂತ್ರಜ್ಞಾನದ ಬಗ್ಗೆಯೂ ಶ್ಲಾಘಿಸಿದರು.
Key words: Law Guide, 2026 Calendar, Appreciation, Judge Krishna Dixit







