ಸಿಎಂ , ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್  ಬೀಗತನ ಮಾಡಿದಂತಿದೆ- ಮಾಜಿ ಸಚಿವ ಕೆ.ಎನ್ ರಾಜಣ್ಣ

ತುಮಕೂರು,ಡಿಸೆಂಬರ್,3,2025 (www.justkannada.in):  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ ಇದೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನದ ರೀತಿ ಆಗಿದೆ.  ಮೊದಲು ಒಂದು ಕಡೆ ಹೆಣ್ಣು ನೋಡೋಕೆ ಹೋಗುತ್ತಾರೆ. ಅ ಮೇಲೆ ಗಂಡು ನೋಡೋಕೆ ಬರುತ್ತಾರೆ  ಆ ರೀತಿಯಾಗಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್ ಎಂದರು.

ಏನಿದೆಯೋ ಅದೇ ಮುಂದುವರೆದುಕೊಂಡು ಹೋಗುತ್ತೆ. ಯಾವುದೂ ಕೂಢ ರಿವರ್ಸ್ ಆಗುವುದಿಲ್ಲ. ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಆ ರೀತಿಯಾಗಿ ಸಿಎಂ, ಡಿಸಿಎಂ ಇಬ್ಬರ ಮನೆಯಲ್ಲೂ ಆಗಿದೆ ಎಂದು ರಾಜಣ್ಣ ಹೇಳಿದರು.

Key words: CM, DCM, breakfast ,meeting, Former Minister, K.N. Rajanna