ಸರ್ಕಾರಿ ಹುದ್ದೆಗಳ ಭರ್ತಿ, ನೇಮಕಾತಿ ಆರಂಭಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ದ ಬೃಹತ್ ಹೋರಾಟ: ಬಿಗಿ ಭದ್ರತೆ

ಧಾರವಾಡ,ಡಿಸೆಂಬರ್,1,2025 (www.justkannada.in): ಅಧಿಕಾರಕ್ಕೇರಿ ಎರಡುವರೆ ವರ್ಷ ಕಳೆದರೂ ಸರಿಯಾಗಿ ಸರ್ಕಾರಿ ಹುದ್ದೆಗಳ ಭರ್ತಿ, ನೇಮಕಾತಿ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಸಿಡಿದೆದ್ದಿರುವ ಉದ್ಯೋಗಾಕಾಂಕ್ಷಿಗಳು ಇಂದು ಧಾರವಾಡದಲ್ಲಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಧಾವರಾಢದಲ್ಲಿಂದು ಜನಸಾಮಾನ್ಯರ ವೇದಿಕೆ ವತಿಯಿಂದ ಬೃಹತ್  ಹೋರಾಟ ಹಮ್ಮಿಕೊಳ್ಳಲಾಗಿದ್ದು ಶ್ರೀನಗರ ವೃತ್ತದಿಂದ ಪ್ರತಿಭಟನೆ ಆರಂಭವಾಗಲಿದೆ.  ಪ್ರತಿಭಟನೆಯಲ್ಲಿ ಲಕ್ಷಾಂತರ ಉದ್ಯೋಗಕಾಂಕ್ಷಿಗಳು ಪಾಲ್ಗೊಂಡು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ನೇಮಕಾತಿ ಆರಂಭಕ್ಕೆ ಆಗ್ರಹಿಸಿ ಉದ್ಯೋಗಕಾಂಕ್ಷಿಗಳು ನಡೆಸಲು ಮುಂದಾಗಿರುವ ಹೋರಾಟಕ್ಕೆ ಪೊಲೀಸರು ಅನುಮತಿ ನೀಡಿಲ್ಲ. ಆದರೂ ಸಹ ಸೆಡ್ಡು ಹೊಡೆದು ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

ಇನ್ನು ಬೃಹತ್ ಹೋರಾಟ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ  ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಮಿನಷನರ್ ಇಬ್ಬರು ಡಿಸಿಎಪಿ ಇಬ್ಬರು ಎಸ್ ಪಿ  ಸೇರಿ ಪೊಲೀಸರನ್ನ ನಿಯೋಜಿಸಲಾಗಿದೆ.

ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಯಾವುದೇ ನೇಮಕಾತಿಗಳು ನಡೆಯದಂತೆ ಸರ್ಕಾರ ತಡೆ ನೀಡಿತ್ತು. ಇನ್ನೇನು ನೇಮಕಾತಿಗಳು ಆರಂಭವಾಗುವ ವೇಳೆಗೆ ಮೀಸಲಾತಿ ವಿಚಾರವಾಗಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ನೇಮಕಾತಿಗಳಿಗೆ ತಡೆ ನೀಡಿದೆ.

Key words:  Massive, protest, against, government, filling ,government posts