ಪೋಕ್ಸೋ ಕೇಸ್ ನಲ್ಲಿ ಮುರುಘಾ ಶ್ರೀ ಖುಲಾಸೆ: ಮೇಲ್ಮನವಿಗೆ ಒತ್ತಾಯ ಮಾಡ್ತೀವಿ- ಒಡನಾಡಿ ಸ್ಟಾನ್ಲಿ

ಮೈಸೂರು,ನವೆಂಬರ್,26,2025 (www.justkannada.in):  ಮೊದಲ ಪೋಕ್ಸೋ ಕೇಸ್ ನಲ್ಲಿ ಮುರುಘಾ ಶ್ರೀ ಖುಲಾಸೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಒಡನಾಡಿ ಸ್ಟಾನ್ಲಿ, ಈ ಸಂಬಂಧ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಒಡನಾಡಿ ಸ್ಟಾನ್ಲಿ ಅವರು, ಈ ತೀರ್ಪನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನಾವು ಕೂಡ ಮೇಲ್ಮನವಿಗೆ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಮಕ್ಕಳ ಪರವಾಗಿ ನಾವು ನಿಲ್ಲುತ್ತೇವೆ. ಇದು ತರಹದ ತೀರ್ಪು ದುಡ್ಡಿದ್ದರೆ  ಪವರ್ ಇದ್ದರೆ ನಾವು ಗೆದ್ದುಕೊಂಡು ಬರಬಹುದು ಎಂಬಂತಾಗುತ್ತದೆ. ಆರೋಪಿಗಳು ಕುಣಿದಾಡುತ್ತಾ ಹೊರಗಡೆ ಬರುತ್ತಾರೆ ಅಂದರೆ ನೈತಿಕ ಸ್ಥೈರ್ಯ ತುಂಬತ್ತೆ. ನೊಂದಿರುವವರಿಗೆ ಸ್ಥೈರ್ಯ ಕುಗ್ಗುತ್ತದೆ.  ಕುಂಬಾರನಿಗೆ ವರುಷ ಮಡಿಕೆ ಒಡೆಯುವವನಿಗೆ ನಿಮಿಷ ಆ ರೀತಿ ಆಗಿದೆ. ಶಿಕ್ಷೆ ಆಗಲಿಲ್ಲ ಅಂತ ಏನಿಲ್ಲ. ಮಕ್ಕಳ ಪರವಾಗಿ ನಿಲ್ಲಬೇಕಿತ್ತು. ಹೆಚ್ಚಿನ ತನಿಖೆ ಲೋಪದೋಷ ಕಂಡು ಹಿಡಿಯಬೇಕಿತ್ತು ಎಂದು ಬೇಸರ ವ್ಯಕ್ತಡಿಸಿದರು.

ಒಂದೇ ದಿನ ಮಕ್ಕಳ ಕೌನ್ಸೆಲಿಂಗ್ ಮಾಡಿದರು. ಅದು ಸಾಧ್ಯನಾ? 90 ಮಕ್ಕಳ ಕೌನ್ಸಲಿಂಗ್ ಒಂದೇ ದಿನಕ್ಕೆ ಸಾಧ್ಯನಾ? ಮಹಜರಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಸಾಕಷ್ಟು ಒತ್ತಡಗಳನ್ನು ಹಾಕಿದ್ದಾರೆ. ಆರೋಪಿಗಳನ್ನು ಕಾಪಾಡಿಕೊಂಡು ಹೋದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲು ಸಾಧ್ಯವಿಲ್ಲ. ಈ ತೀರ್ಪಿಗೆ ನಮ್ಮ ವ್ಯವಸ್ಥೆಯೇ ಕಾರಣ. ಒತ್ತಡ ಆಮಿಷ ಭಯ ಧರ್ಮ ಎಲ್ಲವೂ ಇಲ್ಲಿ ಕೆಲಸ ಮಾಡಿದೆ ಎಂದರು.

ಇದು ಸರ್ಕಾರದ ವೈಫಲ್ಯ ಹಾಗೂ ಬುದ್ಧಿವಂತಿಕೆಗೆ ಸಿಕ್ಕ ತೀರ್ಪು. ಈ ಕೇಸ್ ನ ಸಾಕಷ್ಟು ಲೋಪದೋಷಗಳು ತನಿಖೆ ಹಂತದಲ್ಲೇ ಆಗಿದೆ. CWC ಸರಿಯಾಗಿ ಮಕ್ಕಳ ಕೌನ್ಸೆಲಿಂಗ್ ಮಾಡಿಲ್ಲ. ಇಲ್ಲಿ ಪ್ರಭಾವಿಗಳ ಬುದ್ಧಿವಂತಿಕೆ ಕೆಲಸ ಮಾಡಿದ್ದು, ಮಕ್ಕಳ ಪರ ನಿಂತುಕೊಳ್ಳಬೇಕಿದ್ದ ಅನೇಕರು ಪ್ರಭಾವಿಗಳ ಪರ ನಿಂತಿದ್ದಾರೆ. ಪೊಲೀಸರು ಸರಿಯಾದ ರೀತಿ ಸಾಕ್ಷಿ ಪುರಾವೆ ಸಂಗ್ರಹಿಸಿಲ್ಲ. ಸರ್ಕಾರ ಮೇಲ್ಮನವಿ ಸಲ್ಲಿಸುತ್ತದೆ ಎಂಬ ಭರವಸೆ ಇದೆ. ಮಕ್ಕಳಿಗೆ ಧೈರ್ಯವಾಗಿರಿ ಎಂದು ಹೇಳಿದ್ದೇನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದೆ.  ನ್ಯಾಯ ಸಿಗತ್ತೆ ಅನಿಸುತ್ತಿದೆ. ಮುಂದಿನ ಹೋರಾಟಕ್ಕೆ ಸಾಕಷ್ಟು ಹಣಬಲ ಶಕ್ತಿ ಎಲ್ಲವೂ ಬೇಕು. ಸರ್ಕಾರ ಏನು ಮಾಡುತ್ತದೆ ನೋಡಿಕೊಂಡು ನಾವು ಮುಂದೆ ಏನು ಅಂತಾ ತೀರ್ಮಾನ ಮಾಡುತ್ತೇವೆ ಎಂದರು.

ನಾನು ಮಕ್ಕಳ ಜೊತೆ ಮಾತನಾಡುತ್ತೇನೆ. ಮಕ್ಕಳಿಗೆ ಧೈರ್ಯ ಹೇಳಿದ್ದೇವೆ. ಇವತ್ತಲ್ಲ ನಾಳೆ ನ್ಯಾಯ ಸಿಗತ್ತದೆ ಅಂತ ಹೇಳಿದ್ದೇನೆ. ಈ ಹೋರಾಟ ನಿಲ್ಲುವುದಿಲ್ಲ ಮುಂದುವರೆಯುತ್ತದೆ ಎಂದು ಒಡನಾಡಿ ಸ್ಟಾನ್ಲಿ ಹೇಳಿದರು.

Key words: Muruga Shri,  acquittal, POCSO case, Odanadi Stanley