ಬೆಂಗಳೂರು,ನವೆಂಬರ್,22,2025 (www.justkannada.in): ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಡಿ ಕುಮಾರಸ್ವಾಮಿ ಮರು ಆಯ್ಕೆಯಾದರು.
ಜೆಡಿಎಸ್ ಪಕ್ಷ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಮಹಾ ಅಧಿವೇಶನಕ್ಕೆ ದೀಪ ಬೆಳಗುವ ಮೂಲಕ ಹೆಚ್ ಡಿ ದೇವೇಗೌಡರು ಚಾಲನೆ ನೀಡಿದರು.
ಜೆಡಿಎಸ್ ರಜತ ಮಹೋತ್ಸವ ನಿಮಿತ್ತ ಕಾರ್ಯಕ್ರಮದಲ್ಲಿ ಬೆಳ್ಳಿ ನಾಣ್ಯ ಲೋಕಾರ್ಪಣೆ ಮಾಡಲಾಯಿತು. ಬೆಳ್ಳಿ ನಾಣ್ಯದ ಮೇಲೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ಚಿತ್ರವಿದೆ.
ಕಾರ್ಯಕ್ರಮದಲ್ಲಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಲ್ ಪಿ ನಾಯಕ ಸುರೇಶ್ ಬಾಬು, ಎಂಎಲ್ ಸಿಗಳಾದ ಶರವಣ, ಭೋಜೇಗೌಡ, ಸಂಸದ ಮಲ್ಲೇಶ್ ಬಾಬು ಭಾಗಿಯಾಗಿದ್ದರು.
Key words: JDS national president, HD Devegowda, state president, HDK







