ಮೈಸೂರು,ನವೆಂಬರ್,17,2025 (www.justkannada.in): ಭಾಷೆಯ ಮೂಲಕ ನಮ್ಮ ಇಡೀ ಸಂಸ್ಕೃತಿ ಮುಂದಿನ ತಲೆಮಾರಿಗೆ ಕೊಡುಗೆಯಾಗುತ್ತದೆ. ನಮ್ಮಲ್ಲಿರುವ ಮಾತೃಭಾಷೆಯನ್ನು ಮಕ್ಕಳಿಗೆ ಎರವಲು ಮಾಡಿದಾಗ ಮಾತ್ರ ಸಮಾಜದ ಆಸ್ತಿಯಾಗಿ ಮಕ್ಕಳು ರೂಪುಗೊಳ್ಳುತ್ತಾರೆಂದು ಸಾಹಿತಿ ಡಾ.ಕೆ.ಮಾಲತಿ ಅಭಿಪ್ರಾಯಪಟ್ಟರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಸಹಯೋಗದಲ್ಲಿ ಜಯನಗರದ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡವನ್ನು ಕಲಿಸುವ ನಿಟ್ಟಿನಲ್ಲಿ ಪೋಷಕರು ಚಿಂತನೆ ನಡೆಸೋಣ. ಯಾವುದೇ ವ್ಯಕ್ತಿ ತನ್ನ ಸಂಕಷ್ಟದ ಸಮಯದಲ್ಲಿದ್ದಾಗ ಮಾತೃ ಭಾಷೆಯೇ ಆತನಿಂದ ಹೊರಬರುತ್ತದೆ ಎಂದರು.
ರೈಲ್ವೇ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ ಬಿ. ಮಂಜೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಮುಖ್ಯ ಸಂಚಾಲಕಿ ಜೆ.ಶೋಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡ ಉಪನ್ಯಾಸಕ ಡಾ.ನೀಗೂ ರಮೇಶ್ ಮತ್ತು ಸಾಹಿತಿ ಶ್ಯಾಮೇಶ್ ಅತ್ತಿಗುಪ್ಪೆ, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೀನಾ ಕುಮಾರಿ, ನೇಗಿಲಯೋಗಿ ಮುಖ್ಯಸ್ಥ ರವಿಕುಮಾರ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ರಾಣಿ ಮಹೇಶ್, ವಿಜಯಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.
Key words: Mysore, Kannada Rajyotsava, Negilayogi Social Service Trust







