ಮುಡಾ ಭೂಸ್ವಾಧೀನ ಪ್ರಕರಣ: ಏಳು ಅಧಿಕಾರಿಗಳ  ವಿಚಾರಣೆಗೆ ಅನುಮತಿ ಕೋರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದ  ಲೋಕಾಯುಕ್ತ ಎಸ್ಪಿ.

Mysore Lokayukta SP T.J. Udesh has written a letter to the Lokayukta Director General of Police seeking permission to investigate seven officers who have committed dereliction of duty from 2016 to 2024 in connection with the Muda land acquisition case. He has informed in the letter about the land acquisition case that he has examined the files and records related to Survey No. 20/1 of Belavatta village, Survey No. 192 of Kyathamaranahalli village, Survey No. 88/2 of Hebbal village, Survey No. 648 of Kesare village and Survey No. 14/B of Eranagere village.

 

ಮೈಸೂರು, ನ.೧೬, ೨೦೨೫:  ಮುಡಾ ಭೂ ಸ್ವಾಧೀನ ಪ್ರಕರಣ ಸಂಬಂಧ 2016 ರಿಂದ 2024 ರವರೆಗೆ ಕರ್ತವ್ಯ ಲೋಪ ಎಸಗಿರುವ ಏಳು ಅಧಿಕಾರಿಗಳನ್ನು ತನಿಖೆಗೊಳಪಡಿಸಲು ಅನುಮತಿ ನೀಡುವಂತೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಅನುಮತಿ ಕೋರಿದ್ದಾರೆ.

ಬೆಲವತ್ತ ಗ್ರಾಮದ ಸರ್ವೆ ನಂಬರ್ 20/1, ಕ್ಯಾತಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 192, ಹೆಬ್ಬಾಳು ಗ್ರಾಮದ ಸರ್ವೆ ನಂಬರ್ 88/2, ಕೆಸರೆ ಗ್ರಾಮದ ಸರ್ವೆ ನಂಬರ್ 648 ಹಾಗೂ ಈರನಗೆರೆ ಗ್ರಾಮದ ಸರ್ವೆ ನಂಬರ್ 14/ಬಿ ಗೆ ಸಂಬಂಧಿಸಿದಂತೆ ಕಡತಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದೇನೆ ಎಂದು ಭೂಸ್ವಾಧೀನ ಪ್ರಕರಣದ ಬಗ್ಗೆ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಜಮೀನು ಮಾಲೀಕರೊಂದಿಗೆ ಮಾಡಿಕೊಂಡಿರುವ ಪರಸ್ಪರ ಒಪ್ಪಂದದ ಪಟ್ಟಿ, ಯುಎಲ್ ಪಿ ಪಟ್ಟಿ ಹಾಗೂ ಪರಿಹಾರ ಪಾವತಿ ವಹಿಗಳ ಪ್ರತಿಗಳನ್ನು ದೃಢೀಕರಿಸಿ ಪ್ರತಿ ಒದಗಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಮುಡಾದಲ್ಲಿ 2016 ರಿಂದ 2024 ರವರೆಗೆ ಕರ್ತವ್ಯ ನಿರ್ವಹಿಸಿದ 7 ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿದ್ದಾರೆ.

ಮುಡಾ ಭೂ ಮಾಪಕರಾದ ಕಾವೇರಿಗೌಡ, ಎನ್.ಟಿ.ಹನುಮೇಗೌಡ, ವಿಶೇಷ ಭೂಸ್ವಾಧೀನಾಧಿಕಾರಿ ವಿಷ್ಣುವರ್ಧನ ರೆಡ್ಡಿ, ವಿಷಯ ನಿರ್ವಾಹಕ ದರ್ಶನ್, ವ್ಯವಸ್ಥಾಪಕಿ ಶೃತಿ, ಅಧೀಕ್ಷಕ ಇಂಜಿನಿಯರ್ ಚನ್ನಕೇಶವ, ಎಸ್ ಡಿಎ ಸಚಿನ್ ಅವರ ಕರ್ತವ್ಯ ಲೋಪದ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕರಿಗೆ ಲೋಕಾಯುಕ್ತ ಎಸ್ಪಿ ಉದೇಶ್ ಅವರು ಪತ್ರ ಬರೆದು ಅನುಮತಿ ಕೋರಿದ್ದಾರೆ.

ಈಗ ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕರು ಸರ್ಕಾರದ ಅನುಮತಿ ಕೋರಲಿದ್ದಾರೆ. ತರುವಾಯ ಸರ್ಕಾರದ ತೀರ್ಮಾನದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

key words: MUDA, land acquisition case, Lokayukta SP, Director General of Police, seeking permission, interrogate, seven officers.

SUMMARY:

MUDA land acquisition case: Lokayukta SP writes to Director General of Police seeking permission to interrogate seven officers.

Mysore Lokayukta SP T.J. Udesh has written a letter to the Lokayukta Director General of Police seeking permission to investigate seven officers who have committed dereliction of duty from 2016 to 2024 in connection with the Muda land acquisition case.

He has informed in the letter about the land acquisition case that he has examined the files and records related to Survey No. 20/1 of Belavatta village, Survey No. 192 of Kyathamaranahalli village, Survey No. 88/2 of Hebbal village, Survey No. 648 of Kesare village and Survey No. 14/B of Eranagere village.