ಬೆಂಗಳೂರು, ನ.೧೩,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಂಚಿಕೆ ಹಗರಣ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ವಂಚನೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ತನ್ನಿಂದ 2018, 2019 ಹಾಗೂ 2020ರಲ್ಲಿ ಪ್ರತಿ ವರ್ಷ ತಲಾ 1 ಲಕ್ಷದಂತೆ ಮೂರು ಲಕ್ಷ ರೂ. ಸಾಲ ಪಡೆದು ಅದನ್ನು ಮರುಪಾವತಿಸದೆ ಸ್ನೇಹಮಯಿ ಕೃಷ್ಣ ವಂಚಿಸಿದ್ದಾರೆ ಎಂದು ಚಾಮರಾಜನಗರ ಕರುಣಾಕರ ಪ್ರಕರಣ ದಾಖಲಿಸಿದ್ದರು.
ಅದರ ವಿಚಾರಣೆ ಚಾಮರಾನಗರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆ ವಿಚಾರಣೆ ರದ್ದುಪಡಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಹೈಕೋರ್ಟ್ ನ ಮುಂದಿನ ವಿಚಾರಣೆವರೆಗೆ ಚಾಮರಾಜನಗರ ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆ ತಡೆ ನೀಡಿತು. ಅಲ್ಲದೆ, ದೂರುದಾರ ಕರುಣಾಕರ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
key words: High Court, stays hearing, fraud case against, Snehamayi Krishna

SUMMARY:
High Court stays hearing of fraud case against Snehamayi Krishna

The High Court has stayed the hearing of the fraud case against social activist Snehamayi Krishna, who has accused Chief Minister Siddaramaiah of the MUD site allocation scam. Chamarajanagar Karunakar had filed a case alleging that Snehamayi Krishna had cheated him by taking loans of Rs 1 lakh each in 2018, 2019 and 2020 and not repaying them.







