ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ: ನಾಲ್ವರ ವಿರುದ್ದ FIR ದಾಖಲು

ಮೈಸೂರು, ನವೆಂಬರ್,13,2025 (www.justkannada.in): ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿಕಾರ್ಮಿಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.

ಟಿ.ನರಸೀಪುರದ ನಿವಾಸಿ ಗಮಹದೇವಸ್ವಾಮಿ ಗಾಯಗೊಂಡ ಕೂಲಿ ಕಾರ್ಮಿಕ. ಈ ಸಂಬಂಧ ಸುರಕ್ಷತಾ ಕ್ರಮ ಅನುಸರಿಸದ ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ ನಜರಾಬಾದ್ ಪೊಲೀಸ್ ಠಾಣೆಯಲ್ಲಿ  ಎಫ್ ಐಆರ್ ದಾಖಲಾಗಿದೆ.

ಮಹದೇವಸ್ವಾಮಿ ಅವರು ಸಿದ್ದಾರ್ಥ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಸೆಂಟರಿಂಗ್ ಸೀಲಿಂಗ್ ಕುಸಿದಿದೆ.  ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡ ಮಹದೇವಸ್ವಾಮಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ  ಮಹದೇವಸ್ವಾಮಿ ತಂದೆ ಗುರುಸ್ವಾಮಿ ಅವರಯ ನಜರಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಟ್ಟಡದ ಮಾಲೀಕ, ಮೇಸ್ತ್ರಿ, ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ದ ಸುರಕ್ಷತಾ ಕ್ರಮ ಅನುಸರಿಸದೆ ಕೆಲಸ ಮಾಡಿಸಿದ್ದಾರೆಂದು ಆರೋಪಿಸಿದ್ದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Key words: Ceiling, collapse, laborer, seriously, injured, Mysore