ಮೈಸೂರು, ನವೆಂಬರ್, 13, 2025 (www.justkannada.in): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಕಿರಿಯ ಪವರ್ ಮ್ಯಾನ್(ಎನ್ಕೆಕೆ) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಚಾವಿಸನಿನಿ ಅಂತರ್ಜಾಲ(ವೆಬ್ಸೈಟ್) ದಲ್ಲಿ ಪ್ರಕಟಿಸಲಾಗಿದೆ.
14-10-2024ರ ಉದ್ಯೋಗ ಪ್ರಕಟಣೆಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ(10ನೇ ತರಗತಿ)ಯಲ್ಲಿ ಗಳಿಸಿರುವ ಅಂಕಗಳ ಜೇಷ್ಠತೆ ಆಧಾರದ ಮೇರೆಗೆ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿ, ಕಿರಿಯ ಪವರ್ಮ್ಯಾನ್(ಎನ್.ಕೆ.ಕೆ) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಗಳನ್ನು ಕಟ್ ಆಫ್(CUT-OFF) ಅಂಕಗಳೊಂದಿಗೆ ಚಾವಿಸನಿನಿ ವೆಬ್ಸೈಟ್ https://cescmysore.karnataka.gov.in/ ನಲ್ಲಿ ಪ್ರಕಟಿಸಲಾಗಿದೆ ಎಂದು ಚಾವಿಸನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: CESC, Provisional selection, list, junior power man







