ಮನೆಗೆ ನುಗ್ಗಲು ಹೊಂಚು ಹಾಕುತ್ತಿದ್ದ ಕಳ್ಳ ಅಂದರ್: 2ನೇ ಬಾರಿಗೆ ಮಹಿಳೆ ಜಸ್ಟ್ ಮಿಸ್.

ಮೈಸೂರು,ನವೆಂಬರ್,12,2025 (www.justkannada.in):  ಮಕ್ಕಳ ಜೊತೆ ಇದ್ದ ಗೃಹಿಣಿಯ ಮನೆಗೆ ನುಗ್ಗಲು ಹೊಂಚು ಹಾಕುತ್ತಿದ್ದ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು  ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ಎಂ.ಎಂ.ಬಡಾವಣೆಯಲ್ಲಿ ನಡೆದ ಘಟನೆ ಜನರನ್ನ ಬೆಚ್ಚಿಬೀಳಿಸಿದೆ. ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.

ರಾತ್ರಿ 9 ಗಂಟೆ ವೇಳೆಯಲ್ಲಿ ಖದೀಮನೊಬ್ಬ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕುತ್ತಿದ್ದಾಗ ಗೃಹಿಣಿ ಸೆಲ್ವಿರವರು ಕೂಗಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ದೌಡಾಯಿಸಿ ಖದೀಮನನ್ನ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

ಈ ಹಿಂದೆ ಇದೇ ಮನೆಯಲ್ಲಿ ಈತ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ. ಇದು ಈ ಮನೆಯಲ್ಲಿ ಎರಡನೇ ಬಾರಿ ಕಳ್ಳತನಕ್ಕೆ ಯತ್ನಿಸಿದ್ದಾನೆಂದು ಸೆಲ್ವಿ ಆರೋಪಿಸಿದ್ದಾರೆ. ನನ್ನ ಗಂಡ ಬರದೇ ಇದ್ದಿದ್ದರೆ ನಾನು ಕೊಲೆ ಆಗುತ್ತಿದ್ದೆ.ಇದು ಮೊದಲನೇ ಸಲ ಅಲ್ಲ. ಹಿಂದೆ ಒಂದುಸಾರಿ ಬಂದು ಕುತ್ತಿಗೆಗೆ ಚಾಕು ಹಿಡಿದಿದ್ದ. ನಮಗೆ ರಕ್ಷಣೆ ಬೇಕು ಎಂದು ನಂಜನಗೂಡಿನ ಗೃಹಿಣಿ ಮಾಧ್ಯಮದವರ ಮುಂದೆ ಅವಲತ್ತುಕೊಂಡಿದ್ದಾರೆ.

ಇನ್ನು ಖದೀಮನ ವಿರುದ್ದ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಎಂ.ಎಂ.ಬಡಾವಣೆ ಜನತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Key words: Thief, arrest, house, Mysore