ರೇಣುಕಾಸ್ವಾಮಿ ಕೊಲೆ ಕೇಸ್: ನ.3 ರಂದು ದೋಷಾರೋಪ ನಿಗದಿಗೆ ಕೋರ್ಟ್ ನಿರ್ಧಾರ

ಬೆಂಗಳೂರು,ಅಕ್ಟೋಬರ್,31,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಆರೋಪಿಗಳ ವಿರುದ್ದ ನವೆಂಬರ್ 3 ರಂದು ದೋಷಾರೋಪ ನಿಗದಿಗೆ ಬೆಂಗಳೂರು 57ನೇ ಸಿಸಿಎಚ್ ನ್ಯಾಯಾಲಯ ನಿರ್ಧರಿಸಿದೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ಪವಿತ್ರಾಗೌಡ, ನಟ ದರ್ಶನ್ ಸೇರಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆ ನಡೆಸಿದ ನ್ಯಾಯಲಯ ನವೆಂಬರ್ 3 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿ ಮಾಡಲು ತೀರ್ಮಾನಿಸಿ ವಿಚಾರಣೆಯನ್ನ ನವೆಂಬರ್ 3ಕ್ಕೆ ಮುಂದೂಡಿಕೆ ಮಾಡಿದೆ.

Key words: Renukaswamy, murder case, Actor Darshan, Court, November 3