ಬೆಂಗಳೂರು,ಅಕ್ಟೋಬರ್,29,2025 (www.justkannada.in): ಅಣ್ಣನನ್ನ ಸಿಎಂ ಮಾಡಬೇಕೆಂಬ ಆಸೆ ನನಗೂ ಇದೆ. ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ವಿಚಾರ ಗೊತ್ತಿಲ್ಲ. ನವೆಂಬರ್ 15ರ ಕ್ರಾಂತಿ ಬಗ್ಗೆ ಮಾಹಿತಿ ಇಲ್ಲ. ನವೆಂಬರ್ ಅಂದ್ರೆ ನನಗೆ ನೆನಪಾಗೋದು ಕನ್ನಡ ರಾಜ್ಯೋತ್ಸವ. ಸಿದ್ದರಾಮಯ್ಯ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಒಳ್ಳೆಯದು. 95 ರಿಂದ 98 ವಯಸ್ಸಾದವರೂ ರಾಜಕಾರಣದಲ್ಲಿ ಇದ್ದಾರೆ ಎಂದರು.
ಇನ್ನು ಕೆ.ಎನ್ ರಾಜಣ್ಣ ಸಲಹೆ ಅಭಿಪ್ರಾಯಗಳನ್ನ ತಿಳಿಸ್ತಾರೆ ಸ್ವಾಗತ . ಎಲ್ಲಾ ಸಂದರ್ಭಧಲ್ಲಿ ಎಲ್ಲರನ್ನೂ ಸಂತೋಷ ಪಡಿಸಲು ಸಾಧ್ಯವಿಲ್ಲ. ನಾವು ಯಾವಾಗಲೂ ಎಣ್ಣೆಯನ್ನ ಮೈಗೆ ಹಚ್ಚಿಕೊಳ್ಳೂವುದಿಲ್ಲ ಎಂದರು.
ಹೆಚ್ಚುವರಿ ಡಿಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಎಲ್ಲರ ಸಲಹೆಗಳನ್ನ ಹೈಕಮಾಂಡ್ ಗಮನಿಸುತ್ತೆ. ದಲಿತ ಸಿಎಂ ಚರ್ಚೆ ವಿಚಾರ ಸ್ವಾಗತ, ಸಮಾವೇಶ ಒಳ್ಳೆಯದು ಎಂದು ಡಿಕೆ ಸುರೇಶ್ ತಿಳಿಸಿದರು.
Key words: brother, DK Shivakumar, CM, Former MP, DK Suresh







