ಬೆಂಗಳೂರು,ಅಕ್ಟೋಬರ್,21,2025 (www.justkannada.in): ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು ಈಗಾಗಲೇ ಸಮೀಕ್ಷೆಯ ಅವಧಿಯನ್ನ ಸರ್ಕಾರ ಅಕ್ಟೋಬರ್ 31ಕ್ಕೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರೊಳಗೆ ಜಾತಿಗಣತಿ ಸಮೀಕ್ಷೆ ಕಡ್ಡಾಯವಾಗಿ ಮುಗಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದ ರಾಮನಗರ, ಬೀದರ್ ಹಾಗೂ ಧಾರವಾಡದಲ್ಲಿ ಶೇ.90ರಷ್ಟು ಸಮೀಕ್ಷೆ ಮುಗಿದರೆ, ಬೆಂಗಳೂರಲ್ಲಿ ಶೇ.45ರಷ್ಟು ಮಾತ್ರ ಸಮೀಕ್ಷೆ ಮುಗಿದಿದೆ. ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.
ಅಕ್ಟೋಬರ್ 31ರ ಒಳಗೆ ಕಡ್ಡಾಯವಾಗಿ ಸಮೀಕ್ಷೆ ಮುಗಿಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
Key words: Caste census, survey, must be, completed , October 31st , DCM, DK Shivakumar