ಹಾಸನಾಂಬೆ ದರ್ಶನ ಪಡೆದು ಬರುವಾಗ ಅಪಘಾತ: ಇಬ್ಬರು ಸಾವು

ಹಾಸನ,ಅಕ್ಟೋಬರ್,20,2025 (www.justkannada.in):  ಹಾಸನಾಂಬೆ ದರ್ಶನ ಪಡೆದು ವಾಪಸ್ ಬರುವಾಗ ವೇಗವಾಗಿ ಬಂದ ಕಾರು ಎರಡು ಬೈಕ್ ಗಳಿಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.

ಚನ್ನರಾಯಪಟ್ಟಣದ ಕಗ್ಗಲಿಕಾವಲು ಫಾರೆಸ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ಬಸವರಾಜು, ಅನು ಮೃತಪಟ್ಟವರು. ಘಟನೆಯಲ್ಲಿ ಛಾಯ ಸ್ಥಿತಿ ಚಿಂತಾಜನಕವಾಗಿದ್ದು ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಹಿದ್ ಎಂಬುವವರಿಗೂ ಗಾಯಗಳಾಗಿದೆ.

ಬಸವರಾಜು ಜೊತೆಯಲ್ಲಿ ಅನುಶ್ರೀ ಮತ್ತು ಛಾಯ ಹಾಸನಾಂಬ ದೇವಿಯ ದರ್ಶನ ಪಡೆದು ನಂತರ ಬೈಕ್ ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಕಡೆಯಿಂದ ಬಂದ ಇನ್ನೋವಾ ಕಾರು ಆಕ್ಟಿವಾ ಮತ್ತು ಇನ್ನೊಂದು ಬೈಕ್  ಡಿಕ್ಕಿಯಾಗಿದೆ.

ಈ ವೇಳೆ ಬಸವರಾಜು ಅನುಶ್ರೀ ಸಾವನನಪ್ಪಿದ್ದಾರೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two, Death, accident, Hassan